Posts Slider

Karnataka Voice

Latest Kannada News

ಬಸವರಾಜ ಗುರಿಕಾರ-6188 ಕ್ಕೆ ಸಿಮೀತ: ಕುಬೇರಪ್ಪ-ಫೇಲ್: ಸಂಕನೂರ ಫಸ್ಟ್ ಕ್ಲಾಸ್

1 min read
Spread the love

ಧಾರವಾಡ: ಪಶ್ಚಿಮ ಪದವೀಧರ ಕ್ಷೇತ್ರ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಎಸ್.ವಿ. ಸಂಕನೂರ ಅವರಿಗೆ ಗೆಲುವಿನ ಹಾರ ಬಿದಿದ್ದೆ. ಗದಗ, ಹಾವೇರಿ, ಧಾರವಾಡ, ಉತ್ತರ ಕನ್ನಡ ಜಿಲ್ಲೆಯ ವ್ಯಾಪ್ತಿಯನ್ನು ಹೊಂದಿರುವ ಪಶ್ಚಿಮ ಪದವೀಧರ ಚುನಾವಣೆಯಲ್ಲಿ, ಪದವೀಧರರು ಎರಡನೇಯ ಬಾರಿಗೆ ಸಂಕನೂರ ಅವರನ್ನು ಮತದಾರ ಪ್ರಭು ಕೈ ಹಿಡಿದಿದ್ದಾರೆ.

ಧಾರವಾಡ ಕೃಷಿ ವಿಶ್ವವಿದ್ಯಾಲಯರದ ಆವರಣದಲ್ಲಿ‌ ನಡೆದ ಮತ ಎಣಿಕೆಯು ಮುಕ್ತಾಯಗೊಂಡಿದ್ದು, ಚುನಾವಣಾ ಅಧಿಕಾರಿ ಆಮ್ಲನ್ ಆದಿತ್ಯ ಬಿಸ್ವಾಸ್ ಅಧಿಕೃತ ಘೋಷಣೆ ‌ಮಾಡಿದ್ದಾರೆ.‌ ಬಿಜೆಪಿ‌ ಅಭ್ಯರ್ಥಿ ಎಸ್. ವಿ. ಸಂಕನೂರ ಒಟ್ಟು 23,857 ಮತಗಳನ್ನು ಪಡೆದು, 11409 ಅಂತರದಿಂದ ಕಾಂಗ್ರೆಸ್ ಅಭ್ಯರ್ಥಿಯನ್ನ ಪರಾಭವಗೊಳಿಸಿದರು.

ಎರಡನೇ ಸ್ಥಾನದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಾ ಕುಬೇರಪ್ಪರವರಿಗೆ 12,448 ಮತಗಳು ಬಿದ್ದಿವೆ. ಪಕ್ಷೇತರ ಅಭ್ಯರ್ಥಿ ಹಾಗೂ ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಬಸವರಾಜ ಗುರಿಕಾರವರಿಗೆ 6,188 ಮತಗಳನ್ನು ಪಡೆದುಕೊಂಡಿದ್ದಾರೆ.

ಬಿಜೆಪಿ ಅಭ್ಯರ್ಥಿ ಎಸ್ ವಿ ಸಂಕನೂರವರು 11,409 ಮತಗಳ ಅಂತರದಿಂದ ಜಯವನ್ನು ತಮ್ಮದಾಗಿಸಿಕೊಂಡಿದ್ದಾರೆ. ಒಟ್ಟು 52041 ಎಣಿಕೆಯಾಗಿದ್ದು, ಅದರಲ್ಲಿ 43,269 ಮತಗಳು ಸಿಂಧು ಆಗಿವೆ. ಇನ್ನುಳಿದಂತೆ 8772 ಮತಗಳು ಅಸಿಂಧು‌ ಆಗಿವೆ ಎಂದು ಚುನಾವಣಾ ಅಧಿಕಾರಿಗಳು ತಿಳಿಸಿದ್ದಾರೆ.


Spread the love

Leave a Reply

Your email address will not be published. Required fields are marked *