ಕಲಘಟಗಿಯೇ ನನ್ನ ಕ್ಷೇತ್ರ: ಮಾಜಿ ಶಾಸಕ ಸಂತೋಷ ಲಾಡ
1 min read
ಹುಬ್ಬಳ್ಳಿ: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಿ.ಕೆ.ಶಿವುಕುಮಾರ ಹೇಳಿದ ಹಾಗೇ ನಾನು ಯಲ್ಲಾಪುರಕ್ಕೆ ಹೋಗಿದ್ದೆ. ಗ್ರಾಮ ಪಂಚಾಯತಿ ಚುನಾವಣೆ ಕಾರಣದಿಂದ ಹೋಗಲು ಹೇಳಿದ್ದರಿಂದ ನಾನು ಅಲ್ಲಿಗೆ ಹೋಗಿದ್ದೆ, ಅಷ್ಟೇ. ಆದರೆ, ನಾನು ಕಲಘಟಗಿ ಕ್ಷೇತ್ರದಿಂದಲೇ ಸ್ಪರ್ಧೆ ಮಾಡುತ್ತೇನೆ ಎಂದು ಸಂತೋಷ ಲಾಡ ಹೇಳಿದ್ದಾರೆ.
ಸಂತೋಷ ಲಾಡ ಹೇಳಿದ್ದು ಇಲ್ಲಿದೆ ನೋಡಿ..
ಹುಬ್ಬಳ್ಳಿಯಲ್ಲಿ ಮಾತನಾಡಿದ ಮಾಜಿ ಸಚಿವ ಸಂತೋಷ ಲಾಡ, ಯಲ್ಲಾಪುರ ಕ್ಷೇತ್ರಕ್ಕೆ ಹೋದಾಗ ಅಲ್ಲಿನ ಜನರ ಬೇಡಿಕೆಯಿದೆ ಹೊರತಾಗಿ, ನಾನು ಅಲ್ಲಿ ಚುನಾವಣೆಗೆ ನಿಲ್ಲುತ್ತೇನೆ ಎಂದು ಹೇಳಿಯೇ ಇಲ್ಲ. ನಾನೂ ಕಲಘಟಗಿಯಿಂದಲೇ ಚುನಾವಣೆ ಎದುರಿಸುವುದು ಎಂದು ಹೇಳಿದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವುಕುಮಾರ ಅವರು ಹಲವು ಜವಾಬ್ದಾರಿಗಳನ್ನ ಸಂತೋಷ ಲಾಡ ಅವರಿಗೆ ಹಲವು ಜವಾಬ್ದಾರಿಗಳನ್ನ ಕೊಡುತ್ತಿದ್ದಾರೆ. ಇದೇ ಕಾರಣದಿಂದ ಬೇರೆ ಕ್ಷೇತ್ರಗಳಿಗೆ ಹೋಗಿ ಬರುತ್ತಿದ್ದಾರೆ. ಸಾಮಾನ್ಯವಾಗಿ ಸಂತೋಷ ಲಾಡ ಹೋದಲೆಲ್ಲ ತಮ್ಮದೇ ಕ್ಷೇತ್ರಕ್ಕೆ ಬನ್ನಿ ಎಂದು ಜನರು ಕರೆಯುವುದು ರೂಡಿಯಾಗಿದೆ. ಅದನ್ನೇ ಕೆಲವರು ತಪ್ಪಾಗಿ ಅರ್ಥೈಸಿಕೊಳ್ಳುತ್ತಿದ್ದಾರೆ.