ಪಿಆರ್ ಡಿ ಎಕ್ಸಿಕ್ಯೂಟಿವ್ ಇಂಜಿನಿಯರ್ ಮಾಂಡೋಲಿಕರ ಎಸಿಬಿ ಬಲೆಗೆ
1 min read
ಧಾರವಾಡ: ಗುತ್ತಿಗೆದಾರರ ಲೈಸನ್ಸ್ ಮಾಡಿಕೊಡಲು ಹಣ ಕೇಳಿದ್ದ ಪಂಚಾಯತ್ ರಾಜ್ ಇಲಾಖೆಯ ಎಕ್ಸಿಕ್ಯೂಟಿವ್ ಇಂಜಿನಿಯರೋರ್ವರು ಎಸಿಬಿ ಬಲೆಗೆ ರೆಡ್ ಹ್ಯಾಂಡಾಗಿ ಸಿಕ್ಕಿ ಬಿದ್ದಿದ್ದು, ಇಲಾಖೆಯ ರೀತಿಯಲ್ಲಿ ಕಾನೂನು ಚಟುವಟಿಕೆಗಳನ್ನ ಮಾಡಲಾಗುತ್ತಿದೆ.
ಎಸಿಬಿ ಎಸ್ಪಿ ನ್ಯಾಮಗೌಡ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯ ನೇತೃತ್ವವನ್ನ ಇನ್ಸಪೆಕ್ಟರ್ ಹಿರೇಮಠ ವಹಿಸಿಕೊಂಡಿದ್ದು, ಕಲಘಟಗಿ ತಾಲೂಕಿನ ಕಾಮಧೇನು ಗ್ರಾಮದ ಮಹಿಳೆಯೋರ್ವಳು, ಲೈಸನ್ಸ ಮಾಡಿಸಲು ಪರವಾನಿಗಾಗಿ ಅಲೆಯುತ್ತಿದ್ದರು.
ಹಲವು ಬಾರಿ ತಿರುಗಾಟ ಮಾಡಿದರೂ ಯಾವುದೇ ರೀತಿಯ ಪ್ರಯೋಜನವಾಗದ ಹಿನ್ನೆಲೆಯಲ್ಲಿ ಭ್ರಷ್ಟಾಚಾರ ನಿಗ್ರಹ ದಳಕ್ಕೆ ದೂರು ನೀಡಿದ್ದರು. ದೂರಿನ ಅನ್ವಯ ಹಣದ ಸಮೇತ ದೂರುದಾರರು, ಎಕ್ಸಿಕ್ಯೂಟಿವ್ ಇಂಜಿನಿಯರ ಮನೋಹರ ಮಾಂಡೋಲಿಕರ ಅವರಿಗೆ ನೀಡಿದ್ದು, ಎಸಿಬಿ ಬಲೆಗೆ ಸಿಲುಕಿಕೊಂಡಿದ್ದಾರೆ.
ಧಾರವಾಡದ ಜಿಲ್ಲಾಧಿಕಾರಿಗಳ ಕಂಪೌಂಡನಲ್ಲಿರುವ ಕಚೇರಿಯಲ್ಲಿ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದು, ಎಸಿಬಿ ನಿಯಮದ ಪ್ರಕಾರ ಸ್ಥಳದಲ್ಲಿಯೇ ಮಹಜರು ಮಾಡುತ್ತಿದ್ದಾರೆ. ಎಕ್ಸಿಕ್ಯೂಟಿವ್ ಇಂಜಿನಿಯರ್ ಮನೋಹರ ಮಾಂಡೋಲಿಕರ ವಿರುದ್ಧ ಈ ಹಿಂದೆಯೂ ದೂರುಗಳು ಕೇಳಿ ಬಂದಿದ್ದವು.