ನಕಲಿ ದಾಖಲೆ ಸೃಷ್ಠಿ: ಪೊಲೀಸ್ ‘A1’ ಆರೋಪಿ
1 min read
ಹುಬ್ಬಳ್ಳಿ: ಸಾರ್ವಜನಿಕರಿಗೆ ತೊಂದರೆಯಾದಾಗ ಆರಕ್ಷಕರ ಬಳಿ ಹೋಗುವುದು ಸಾಮಾನ್ಯ. ಆರಕ್ಷಕರೇ ಬಕ್ಷರಾದಾಗ ಸಾರ್ವಜನಿಕರು ನ್ಯಾಯಾಲಯದ ಮೊರೆ ಹೋಗುವುದು ಕೂಡಾ ಅಷ್ಟೇ ಅನಿವಾರ್ಯ. ಇಂತಹದ್ದೇ ಘಟನೆಯೊಂದು ವಾಣಿಜ್ಯನಗರದಲ್ಲಿ ನಡೆದಿದೆ.
ಆನಂದನಗರದ ಆಟೋ ಚಾಲಕ ತನ್ನ ದುಡಿಮೆ ಹಾಗೂ ಬ್ಯಾಂಕ್ ಲೋನ್ ಪಡೆದು ಮನೆಯನ್ನ ಕಟ್ಟಿಕೊಂಡಿದ್ದ. ಹಣದ ಅಡಚಣೆ ಬಂದಿದ್ದರಿಂದ ಆಟೋ ಚಾಲಕ ಚಂದ್ರಶೇಖರ ಬಿರಾದಾರ, ಶ್ರೀಕಾಂತ ಕುರಂದವಾಡ ಎಂಬುವವರಿಗೆ ಲೀಸ್ ಮೇಲೆ ಮನೆಯನ್ನ ಬಿಟ್ಟು ಕೊಟ್ಟಿದ್ದರು. ಆದರೆ, ಮೂರು ವರ್ಷದ ನಂತರ ಮನೆ ತನ್ನದೇ ಎಂದು ಶ್ರೀಕಾಂತ ಕುರಂದವಾಡ ತಗಾದೆ ತೆಗೆದಿದ್ದ. ಇದರಿಂದ ಬೇಸತ್ತ ಚಂದ್ರಶೇಖರ ನ್ಯಾಯಾಲಯದ ಮೆಟ್ಟಿಲೇರಿದ್ದ. ಆಗ ನ್ಯಾಯಾಲಯದ ಶ್ರೀಕಾಂತ ಕುರಂದವಾಡನ ಅರ್ಜಿಯನ್ನ ವಜಾ ಮಾಡಿತ್ತು.
ಮನೆ ಮಾಲೀಕನಿಗೆ ಮನೆ ಬಿಟ್ಟು ಕೊಡುವಂತೆ ಹೇಳಲಾಗಿತ್ತಾದರೂ, ಹಳೇಹುಬ್ಬಳ್ಳಿ ಠಾಣೆಯ ಪೊಲೀಸ್ ಲಕ್ಷ್ಮಣ ನಾಯಕ ಸೇರಿಕೊಂಡು ಮತ್ತೆ ಮನೆಯ ಮಾಲೀಕನಿಗೆ ಧಮಕಿ ಹಾಕಿದ್ದರಂತೆ. ಹೀಗಾಗಿ ಮತ್ತೆ ನ್ಯಾಯಾಲಯಕ್ಕೆ ಹೋಗಿದ್ದು, ಹೀಗಾಗಿ ಈ ಸಂಬಂಧ ಹಳೇಹುಬ್ಬಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಳೇಹುಬ್ಬಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಲಕ್ಷ್ಮಣ ನಾಯಕ ಎಂಬ ಕಾನ್ಸಟೇಬಲ್ ಅವರನ್ನ ಎ1 ಆರೋಪಿ ಮಾಡಲಾಗಿದೆಯಂದು ಗೊತ್ತಾಗಿದೆ.