ಧಾರವಾಡ ತಾ.ಪಂನಲ್ಲಿ ಭಾರತಮಾತೆ, ಗಾಂಧೀಜಿ, ಅಂಬೇಡ್ಕರ್, ನೆಹರು, ವೀರ ಸಾವರ್ಕರ..!
1 min read
ಧಾರವಾಡ: ತಾಲೂಕು ಪಂಚಾಯತಿ ಕಚೇರಿಯಲ್ಲಿ 71ನೇ ಗಣರಾಜ್ಯೋತ್ಸವವನ್ನ ಸಡಗರದಿಂದ ವಿಭಿನ್ನವಾಗಿ ಆಚರಣೆ ಮಾಡಲಾಯಿತು.
ಘಟನಾಘಟಿಗಳು ಡಾನ್ಸ್ ಹೇಗಿತ್ತು ನೋಡಿ..
ತಾಲೂಕು ಪಂಚಾಯತಿಯ ಎಲ್ಲ ಅಧಿಕಾರಿವರ್ಗ ಹಾಗೂ ಜನಪ್ರತಿನಿಧಿಗಳು ಇಂದಿನ ಗಣರಾಜ್ಯೋತ್ಸವದಲ್ಲಿ ತಮ್ಮ ನೆಚ್ಚಿನ ವ್ಯಕ್ತಿಗಳ ಧಿರಿಸುಗಳನ್ನ ಧರಿಸಿಕೊಂಡು ಬಂದಿದ್ದರು. ಮುಖ್ಯವಾಗಿ ತಾಲೂಕು ಪಂಚಾಯತಿ ಅಧಿಕಾರಿ ಎಸ್.ಎಸ್.ಕಾದ್ರೋಳ್ಳಿಯವರು ಲಾಲ ಬಹಾದ್ದೂರ ಶಾಸ್ತ್ರಿಯಾಗಿದ್ದರು. ತಾಲೂಕು ಪಂಚಾಯತಿ ಅಧ್ಯಕ್ಷ ರವಿವರ್ಮಾ ಪಾಟೀಲ ಬಾಬು ಜಗಜೀವನರಾಮ ಎಲ್ಲರ ಮನಸೆಳೆದರು.
ವೀರ ಸಾವರ್ಕರ ಆಗಿ ಬಸವರಾಜ ಬೆಳಾರದ ಎಲ್ಲರ ಗಮನ ಸೆಳೆದರೇ, ನೀರಜ ಜಾಧವ ಶಿವಾಜಿಯಾಗಿ ಎಲ್ಲರನ್ನ ಆಕರ್ಷಿಸಿದರು. ಪಾರ್ವತಿ ಹೆಗಡೆಯವರು ಭಾರತ ಮಾತೆಯಾಗಿ, ಕಿರಣ ಹುಲ್ಲನ್ನವರ ಮಹಾತ್ಮಾ ಗಾಂಧೀಜಿಯಾಗಿ, ಬಸವರಾಜ ಯಂಡಿಗೇರಿ ಅಂಬೇಡ್ಕರಾಗಿದ್ದರು.
ಇನ್ನುಳಿದಂತೆ ಶಿವಾನಂದ ಬಡಿಗೇರ ಸುಭಾಸಚಂದ್ರ ಬೋಸ್, ಬಿ.ಎಸ್.ಮನೋಜ ನೆಹರು, ಗೀತಾ ಹುರಕಡ್ಲಿ ಒನಕೆ ಓಬವ್ವ, ರೇಖಾ ನಾಶಿ ಕಿತ್ತೂರ ಚೆನ್ನಮ್ಮ, ಸುಪ್ರಿಯಾ ತೆಗ್ಗಿನವರ ಝಾನ್ಸಿರಾಣಿ ಲಕ್ಷ್ಮೀಬಾಯಿ, ಸಂತೋಷ ಉಪ್ಪಾರ ಭಗತಸಿಂಗ್, ಪ್ರಶಾಂತ ಚಿಕ್ಕೋಡಿ ರಾಜಗುರು, ಶಿವಾಜಿ ಮಾನೆ ಸುಖದೇವ ಚಿತ್ತರಂಜನದಾಸ, ನೇತ್ರಾವತಿ ದೇಸಾಯಿ ಕೆಳದಿ ಮಲ್ಲಮ್ಮ, ಮಲ್ಲಿಕಾರ್ಜುನ ಎಂಟ್ಹೇತ್ತು ಬಾಲಗಂಗಾಧರ ತಿಲಕ ಹಾಗೂ ಭಾರತಿ ಪಾಟೀಲ ರಾಣಿ ಅಬ್ಬಕ್ಕರಾಗಿದ್ದರು.