ಧಾರವಾಡದಲ್ಲೂ ನಡೆಯುತ್ತಿದೆ ‘ಟ್ರ್ಯಾಕ್ಟರ್’ ಹೋರಾಟ
1 min read
ಧಾರವಾಡ: ಕೇಂದ್ರ ಸರಕಾರ ರೈತ ವಿರೋಧಿ ನೀತಿಯನ್ನ ಜಾರಿಗೆ ತರುತ್ತಿದೆ ಎಂದು ಆರೋಪಿಸಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆಯುತ್ತಿರುವ ಹೋರಾಟಕ್ಕ ಬೆಂಬಲ ವ್ಯಕ್ತಪಡಿಸಿ ಧಾರವಾಡದಲ್ಲೂ ಕಾಂಗ್ರೆಸ್ ಮುಂದಾಳತ್ವದಲ್ಲಿ ಬೃಹತ್ ಟ್ರ್ಯಾಕ್ಟರ್ ಹೋರಾಟ ನಡೆಯುತ್ತಿದೆ.
ಪ್ರತಿಭಟನೆಯ ವೀಡೀಯೋ ಇಲ್ಲಿದೆ ನೋಡಿ..
ಪಿ.ಎಚ್.ನೀರಲಕೇರಿ, ಮಾಜಿ ಸಂಸದ ಐ.ಜಿ. ಸನದಿ , ಶಂಕರ ಹಲಗತ್ತಿ, ಫೀರೊಜಖಾನ ಹವಾಲ್ದಾರ್, ಶ್ರೀಶೃಲಗೌಡ ಕಮತರ, ಮೋಯಿನೋದ್ದೀನ ಗದ್ದಿಗೌಡರ, ಶಿವಾನಂದ ಹಾದಿಮನಿ ಸೇರಿದಂತೆ ಹಲವರ ಉಪಸ್ಥಿತಿಯಲ್ಲಿ ಮೆರವಣಿಗೆಯು ಕಲಾಭವನದಿಂದ ಧಾರವಾಡದ ಪ್ರಮುಖ ಮಾರ್ಗದಲ್ಲಿ ಸಂಚರಿಸಿತು.
ಕೇಂದ್ರ ಸರಕಾರದ ಕೃಷಿ ನೀತಿಯಿಂದ ರೈತರು ಬೀದಿ ಪಾಲಾಗುತ್ತಾರೆ. ಉದ್ಯಮಿಗಳಿಗೆ ಅನುಕೂಲ ಮಾಡಿಕೊಡುವ ಸ್ಕೀಂಗಳನ್ನ ಜಾರಿ ಮಾಡಲಾಗುತ್ತಿದೆ. ಈ ಕಾಯ್ದೆಯನ್ನ ಹಿಂದೆ ಪಡೆಯಲೇಬೇಕೆಂದು ಪ್ರತಿಭಟನಾ ನಿರತರು ಆಗ್ರಹಿಸಿದರು.
ನೂರಾರೂ ಟ್ರ್ಯಾಕ್ಟರಗಳು ಮೆರವಣಿಯೆಲ್ಲಿ ಭಾಗವಹಿಸಿದ್ದರಿಂದ ರಸ್ತೆ ಸಂಚಾರ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿತ್ತು.