ಧಾರವಾಡ ಹೊಯ್ಸಳನಗರದಲ್ಲಿ ಕೈ ಕಾಲು ಕಟ್ಟಿ ಹಾಕಿದ ನಾಗರಿಕರು- ನಡೆದದ್ದೇನು ಗೊತ್ತಾ..?
1 min read
ಧಾರವಾಡ: ಮೊಬೈಲ್ ಕಳ್ಳತನನದಿಂದ ರೋಸಿ ಹೋಗಿದ್ದ ಸಾರ್ವಜನಿಕರಿಗೆ ಮೊಬೈಲ್ ಸಿಕ್ಕಿದ್ದೆ ತಡ, ಆತನ ಹಿಡಿದು ಚೆನ್ನಾಗಿಯೇ ತದಕಿದ್ದು, ಜೊತೆಗೆ ಕೈ ಕಾಲುಗಳನ್ನ ಕಟ್ಟಿ ಹಾಕಿ ಪೊಲೀಸರಿಗೆ ಒಪ್ಪಿಸಿದ ಘಟನೆ ಧಾರವಾಡದ ಹೊಯ್ಸಳನಗರದಲ್ಲಿ ನಡೆದಿದೆ.
ಬಾಡ ಗ್ರಾಮದ ಕುಮಾರ ಗುರುನಾಥ ಬಡಿಗೇರ ಎಂಬ ಯುವಕನೇ ಮೊಬೈಲ್ ಕದ್ದು ಸಿಕ್ಕಿಬಿದ್ದಿದ್ದು ತಕ್ಷಣವೇ ಆತನ ಕೈಕಾಲುಗಳನ್ನ ಕಟ್ಟಿ ತಮ್ಮದೇ ಪ್ರದೇಶದಲ್ಲಿ ಕೂಡಿಸಿ, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಹಲವು ದಿನಗಳಿಂದ ಹಗಲು ಮತ್ತು ರಾತ್ರಿಯಲ್ಲಿ ಮನೆಯೊಳಗಡೆ ಬಂದು ಮೊಬೈಲ್ ಕದ್ದು ಪರಾರಿಯಾಗುತ್ತಿದ್ದ. ಈ ಬಗ್ಗೆ ಸ್ಥಳೀಯರು ತಮ್ಮದೇ ಪ್ರದೇಶದ ಯುವಕರೇ ಹೀಗೆ ಮಾಡುತ್ತಿದ್ದರೆಂದು ತಿಳಿದುಕೊಂಡಿದ್ದರು. ಆದರೆ, ಇಂದು ಮೊಬೈಲ್ ಕದಿಯುತ್ತಿದ್ದಾಗಲೇ ಸಿಕ್ಕಿ ಬಿದ್ದಿದ್ದರಿಂದ ಆರೋಪಿ, ವಿಲವಿಲ ಒದ್ದಾಡುವ ಪರಿಸ್ಥಿತಿ ಒದಗಿ ಬಂದಿತು.