ಧಾರವಾಡ “ಡಿಡಿಪಿಐ ಮೇಲೆ ಕಾನೂನು ಕ್ರಮ”ಕ್ಕೆ ಆಗ್ರಹ: ಹೋರಾಟಕ್ಕೆ ಸಿದ್ಧತೆ….
1 min read
ಕಾನೂನು ಉಲ್ಲಂಘನೆ ಮಾಡಿ ಹಣ ಬಿಡುಗಡೆ ಮಾಡಿರೋ ದೂರು
ಸಂಸದ ಪ್ರಲ್ಹಾದ ಜೋಶಿಯವರಿಗೂ ವಿಷಯದ ಮನವರಿಕೆ
ಹುಬ್ಬಳ್ಳಿ: ತಾಲೂಕಿನ ಮಂಟೂರ ಶಾಲೆಯ ಅನುದಾನ ಬಿಡುಗಡೆ ವೇಳೆಯಲ್ಲಿ ಕಾನೂನು ಬಾಹಿರ ಚಟುವಟಿಕೆ ಮಾಡಿ, ಡಿಡಿಪಿಐ ಅವರು ಹಣ ಪಡೆದು ಆದೇಶ ಹೊರಡಿಸಿದ್ದಾರೆಂದು ಕೆಲವರು ಇಂದು ಸಂಸದ ಪ್ರಲ್ಹಾದ ಜೋಶಿಯವರಿಗೆ ಮನವಿ ನೀಡಿದರು.
ಶಿಕ್ಷಣ ಇಲಾಖೆಯ ಧಾರವಾಡ ಜಿಲ್ಲೆಯ ಉಪನಿರ್ದೇಶಕ ಎಸ್.ಎಸ್.ಕೆಳದಿಮಠ ಅವರು ನಕಲಿಯನ್ನೇ ಅಸಲಿ ಎಂದು ಸರಕಾರಕ್ಕೆ ಮಾಹಿತಿ ನೀಡಿ, ಅನುದಾನ ಬಿಡುಗಡೆ ಮಾಡಿದ್ದಾರೆಂದು ಸಂಸದರಿಗೆ ದೂರಲಾಗಿದೆ.
ಯಾವ ಅನುದಾನವನ್ನ ಬಿಡುಗಡೆ ಮಾಡಲು ಸುತಾರಾಂ ಆಗುವುದಿಲ್ಲವೆಂದು ಡಿಡಿಪಿಐ ಕೆಳದಿಮಠ ಹೇಳಿದ್ದರೋ, ಅದೇ ಕೆಳದಿಮಠ ಅವರು ನಕಲಿ ಶಾಲೆಯಲ್ಲಿನ ನಕಲಿಯನ್ನ ಅದೇ ಶಾಲೆಯಿಂದ ಪಡೆಯಲಾಗಿದೆ ಎಂಬುದನ್ನ ಗ್ರಾಮದ ಹಲವರು ಕೇಂದ್ರ ಸಚಿವರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ.
ಈ ಬಗ್ಗೆ ಧಾರವಾಡ ಡಿಡಿಪಿಐ ಕಚೇರಿ ಎದುರು ಹೋರಾಟ ನಡೆಸಲು ಸಿದ್ಧತೆ ನಡೆದಿದ್ದು, ಡಿಡಿಪಿಐ ವಿರುದ್ಧ ಕಾನೂನು ಕ್ರಮ ಜರುಗಿಸಲು ನ್ಯಾಯಾಲಯದ ಮೊರೆ ಹೋಗುವ ಸಾಧ್ಯತೆಯಿದೆ.