ಧಾರವಾಡ ತಾಲೂಕಿನ ಬೆನಕನಟ್ಟಿಯಲ್ಲಿ ಚಿರತೆ..!
1 min read
ಧಾರವಾಡ: ತಾಲೂಕಿನ ಬೆನಕನಕಟ್ಟಿ ಗ್ರಾಮದ ಜಮೀನಿನಲ್ಲಿ ರಾತ್ರಿ ಚಿರತೆ ಓಡಾಡಿದ ಹೆಜ್ಜೆಗಳು ಸಾರ್ವಜನಿಕರಿಗೆ ಕಂಡು ಬಂದಿದ್ದು, ಆತಂಕದಿಂದ ಜನರು ಮನೆ ಹಿಡಿದು ಕೂಡಬೇಕಾದ ಸ್ಥಿತಿ ನಿರ್ಮಾಣವಾಗಿದೆ.
ಬೆನಕನಕಟ್ಟಿ ಗ್ರಾಮದ ಇಟ್ಟಂಗಿ ಭಟ್ಟಿಗಳ ಮೇಲೆ ಚಿರತೆ ತಿರುಗಾಡಿದ್ದು, ಅದರ ಕಾಲಿನ ಗುರುತುಗಳು ಹುದುಲಿನಲ್ಲಿ ಕಂಡು ಬಂದಿದೆ. ಎರಡ್ಮುರು ಕಡೆಗಳಲ್ಲಿ ಹೆಜ್ಜೆಗಳು ಮೂಡಿದ್ದು, ಜನರಲ್ಲಿ ಆತಂಕ ಮೂಡಿಸಿದೆ.
ರಾತ್ರಿ ಹೊತ್ತು ಬೆನಕನಕಟ್ಟಿ ಮಾರ್ಗದಲ್ಲಿ ಹಾದು ಬೇರೆಡೆ ಹೋಗಿರುವ ಸಾಧ್ಯತೆಯಿದ್ದು, ಹೆಜ್ಜೆ ಜಾಡುಗಳ ಹಿಡಿದು ಅರಣ್ಯ ಇಲಾಖೆಯ ಸಿಬ್ಬಂದಿಗಳು ಪರಿಶೀಲನೆ ನಡೆಸಿದರು ಯಾವುದೇ ಪ್ರಯೋಜನವಾಗಿಲ್ಲ.
ಬೆನಕನಕಟ್ಟಿ ಗ್ರಾಮಸ್ಥರಿಗೆ ಅರಣ್ಯ ಇಲಾಖೆ ಅಧಿಕಾರಿಗಳು ಮನೋಸ್ಥೈರ್ಯ ತುಂಬಿದ್ದು, ಭಯ ಬೀಳದ ಇರುವಂತೆ ಮನವಿ ಮಾಡಿಕೊಂಡಿದ್ದಾರೆ. ಹೊರಗಡೆ ಹೋಗುವಾಗ ಜಾಗರೂಕತೆ ವಹಿಸಿ ಎಂದು ಸೂಚನೆಯನ್ನ ನೀಡಿದ್ದಾರೆ.