ಧಾರವಾಡ- ರೋಗಗ್ರಸ್ಥ ಅನಾಥರಿಗೆ ಬದುಕಾದ ‘ACHR’ ಜೀವಗಳು..!
1 min read
ಧಾರವಾಡ: ಅವರು ಯಾರೂ ಎಂಬುದು ಗೊತ್ತಿರಲ್ಲ. ಅವರಿಗೆ ಇರೋ ರೋಗ ಯಾವುದೆಂದು ಗೊತ್ತೆ ಆಗಲ್ಲ. ಆದರೂ, ಅವರನ್ನ ಜಿಲ್ಲಾಡಳಿತ ಗಮನಿಸೋದೆ ಇಲ್ಲ. ಮಹಾಮಾರಿ ಕೊರೋನಾಗೆ ನೂರೆಂಟು ಕ್ರಮಗಳನ್ನ ತೆಗೆದುಕೊಳ್ಳುವ ಆಡಳಿತಗಳು, ಇಂಥವರ ಬಗ್ಗೆ ಕಾಳಜಿಯನ್ನ ತೆಗೆದುಕೊಂಡಿದ್ದು, ನಿಮಗೆ ಕಾಣ ಸಿಗಲ್ಲ. ಆದರೆ, ಜಿಲ್ಲಾಡಳಿತವೂ ಮಾಡದ್ದನ್ನ ಧಾರವಾಡದ ಕೆಲವರು ಸದ್ದಿಲ್ಲದೇ ಮಾಡುತ್ತಿದ್ದಾರೆ.
ಹೌದು.. ಧಾರವಾಡದ ಯಾವುದೇ ಮೂಲೆಯಲ್ಲೂ ಅನಾಥರು ಕಂಡರೇ ಅವರಿಗೆ ಚೆನ್ನಾಗಿ ಬದುಕು ಕಟ್ಟಿಕೊಡಲು ಅನುವು ಮಾಡಿಕೊಡುತ್ತಿದೆ ಕರ್ನಾಟಕದ ಮಹಿಳಾ ಮತ್ತು ಮಕ್ಕಳ ಸಾಧನಾ ಅಭಿವೃದ್ಧಿ ಚಾರಿಟೇಬಲ್ ಟ್ರಸ್ಟ್ ನ ಸಾಧನ ಅನಾಥಾಶ್ರಮ ಮತ್ತು ವೃದ್ಧಾಶ್ರಮ.
ನಗರದ ಮೂಲೆಯೊಂದರಲ್ಲಿ ಅನಾಥವಾಗಿದ್ದ ವ್ಯಕ್ತಿಯನ್ನ ಅನಾಥಾಶ್ರಮಕ್ಕೆ ಕರೆದುಕೊಂಡು ಮಾನವೀಯತೆ ಮೆರೆದ ಅನಾಥಾಶ್ರಮದ ರಾಜ್ಯಾಧ್ಯಕ್ಷರಾದ ಡಾ. ಪುಷ್ಪಲತಾ ಪವಿತ್ರರಾಜ ಹಾಗೂ ಧಾರವಾಡ ಶಾಖೆಯ ಮುಖ್ಯಸ್ಥ ACHRನ ಜಿಲ್ಲಾಧ್ಯಕ್ಷ ಸತೀಶ್ ಸರ್ಜಾಪುರ್ ಅವರನ್ನ ACHRನ ಪ್ರಮುಖರಾದ ಬಸವರಾಜ ಆನೇಗುಂದಿ ಅಭಿನಂದಿಸಿದ್ದಾರೆ.
ಮಾನವೀಯತೆಯ ತಳಹದಿಯ ಮೇಲೆ ಮಾನವನ ಬದುಕು ಎಂಬುದನ್ನ ಸಾದರಪಡಿಸುವಂತೆ ACHRನವರು ನಡೆದುಕೊಂಡಿದ್ದಾರೆ. ಇವರ ಬಡವರ ಪರ ಕಾಳಜಿಯನ್ನ ಪ್ರಜ್ಞಾವಂತರು ಶ್ಲಾಘಿಸಿದ್ದಾರೆ.