ತೇಗೂರ ಬಳಿಯ ಮುಲ್ಲಾ ದಾಬಾ ಮಾಲೀಕ ಇನ್ನಿಲ್ಲ
1 min read
ಧಾರವಾಡ: ನಗರದಿಂದ ಬೆಳಗಾವಿಗೆ ಹೋಗುತ್ತಿದ್ದ ರಸ್ತೆಯಲ್ಲಿ ಬರುತ್ತಿದ್ದ ತೇಗೂರ ಬಳಿಯ ಪ್ರಸಿದ್ಧ ಮುಲ್ಲಾ ದಾಬಾದ ಮಾಲೀಕ ಅನಾರೋಗ್ಯದಿಂದ ನಿಧನರಾಗಿದ್ದು, ಕುಟುಂಬ ಕಣ್ಣೀರಿನಲ್ಲಿ ಕೈತೊಳೆಯುವಂತಾಗಿದೆ.
ಪಾಕ ಪ್ರಿಯರ ಇಷ್ಟದ ದಾಬಾವಾಗಿದ್ದ ಮುಲ್ಲಾ ದಾಬಾ ಮಾಲೀಕ, ಹಾಜಿ ಅಬ್ದುಲ ಗೌಸಸಾಬ ನಾಯಕ ಕೆಲವು ದಿನಗಳಿಂದ ಅನಾರೋಗ್ಯಕ್ಕೆ ಈಡಾಗಿದ್ದರು. ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲು ಮಾಡಿದ್ದರಾದರೂ, ಆಯವುದೇ ಪ್ರಯೋಜನವಾಗದ ಹಿನ್ನೆಲೆಯಲ್ಲಿ ಮೃತರಾಗಿದ್ದಾರೆ.
ಧಾರವಾಡ ಹಳಿಯಾಳ ರಸ್ತೆಯ ಕೆಐಎಡಿಬಿ ಪ್ಲಾಟಿನ ನಿವಾಸಿಯಾಗಿದ್ದ ಹಾಜಿ ಅಬ್ದುಲ್ ಗೌಸಸಾಬ ನಾಯಕ್ ಅವರಿಗೆ ಪತ್ನಿ ಓರ್ವ ಪುತ್ರ ಹಾಗೂ ಇಬ್ಬರು ಪುತ್ರಿಯರನ್ನ ಅಗಲಿದ್ದಾರೆ. ಮೂಲತಃ ಧಾರವಾಡ ತಾಲೂಕಿನ ಕೋಟೂರ ಗ್ರಾಮದವರಾಗಿದ್ದ ಇವರು ದಾಬಾದಿಂದಲೇ ಹೆಸರು ಗಳಿಸಿದ್ದರು.
ಮಾಲೀಕ ಹಾಜಿ ಅಬ್ದುಲ ಗೌಸಸಾಬ ನಾಯಕ ಅವರ ನಿಧನಕ್ಕೆ ಹಲವರು ಸಂತಾಪ ಸೂಚಿಸಿದ್ದಾರೆ.