ನವೆಂಬರ್ 17ರಿಂದ ಕಾಲೇಜು ಆರಂಭ: ಡಿಸಿಎಂ ಅಶ್ವತ್ಥ ನಾರಾಯಣ
1 min read
ಬೆಂಗಳೂರು: ಕಳೆದ ಎಂಟು ತಿಂಗಳಿಂದ ಬಂದ್ ಆಗಿದ್ದ ಕಾಲೇಜುಗಳನ್ನ ಆರಂಭಿಸಲು ರಾಜ್ಯ ಸರಕಾರ ನಿರ್ಧರಿಸಿದ್ದು, ನವೆಂಬರ 17 ರಿಂದ ಆರಂಭ ಮಾಡಲು ನಿರ್ಧರಿಸಲಾಗಿದ್ದು, ಕಾಲೇಜುಗಳಲ್ಲಿ ಮತ್ತೆ ಆ ದಿನಗಳು ಆರಂಭವಾಗಲಿವೆ.
ಕೇಂದ್ರ ಸರಕಾರದ ಕೋವಿಡ್-19 ಎಚ್ಚರಿಕೆಗಳನ್ನ ತೆಗೆದುಕೊಂಡು ಆರಂಭ ಮಾಡಲು ಸರಕಾರ ನಿರ್ಧರಿಸಿದೆ. ಪದವಿ ಕಾಲೇಜುಗಳು ಆರಂಭವಾಗುವುದಕ್ಕೆ ಬಹಳಷ್ಟು ಒತ್ತಡಯಿದ್ದಿದ್ದನ್ನ ಗಮನಿಸಿ ಇಂತಹ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಡಿಸಿಎಂ ಅಶ್ವತ್ಥ ನಾರಾಯಣ ಹೇಳಿದರು.
ಪದವಿ ಕಾಲೇಜುಗಳಿಗೆ ಕಡ್ಡಾಯವಾಗಿ ಕಾಲೇಜಿಗೆ ಬರಲೇಬೇಕು ಎಂದೇನಿಲ್ಲ. ಕಾಲೇಜಿಗೆ ಬರಬಹುದು ಅಥವಾ ಆನ್ ಲೈನ್ ದಲ್ಲಿಯೂ ತರಗತಿಗಳು ಆರಂಭವಾಗಲಿವೆ. ಪ್ರತಿ ಕಾಲೇಜಿಲ್ಲಿ ಟಾಸ್ಕ್ ಪೋರ್ಸ್ ಇರಲೇಬೇಕು. ಒಂದು ಡೆಸ್ಕನಲ್ಲಿ ಇಬ್ಬರು ಕೂಡಲು ಮಾತ್ರ ಅವಕಾಶ. ವಿದ್ಯಾರ್ಥಿಗಳನ್ನ ಕರೆದುಕೊಂಡು ಹೋಗಲು ಬಸ್ ವ್ಯವಸ್ಥೆಯನ್ನ ಆಯಾ ಕಾಲೇಜು ಮಾಡಬೇಕೆಂದು ಹೇಳಿದರು.
ವಿದ್ಯಾರ್ಥಿಗಳು ಕಾಲೇಜಿಗೆ ಬರಲು ಕಡ್ಡಾಯವಾಗಿ ಪಾಲಕರಿಂದ ಒಪ್ಪಿಗೆ ಪತ್ರವನ್ನ ಪಡೆಯಲೇಬೇಕು ಎಂಬುದನ್ನು ಸರಕಾರ ಹೇಳಿದೆ. ವಿದ್ಯಾರ್ಥಿಗಳಿಗೆ ಯಾವ ಕ್ರಮವನ್ನ ತೆಗೆದುಕೊಳ್ಳಲು ಅವಕಾಶವನ್ನ ನೀಡಿದೆ. ಪದವಿ ಕಾಲೇಜಿನ ಜೊತೆಗೆ ಡಿಪ್ಲೋಮಾ ಮತ್ತು ಇಂಜಿನಿಯರಿಂಗ್ ಕಾಲೇಜುಗಳು ಆರಂಭವಾಗಲಿವೆ.