ಪಬ್ಲಿಕ್ ನೆಕ್ಸ್ಟ ಪ್ರವೀಣ, ಪೊಲೀಸ್ ಸಿದ್ಧಪ್ಪ ಹುಗ್ಗಿ: ಕೊರೋನಾ ಸೇನಾನಿ ಪ್ರಶಸ್ತಿಗೆ ಭಾಜನ
1 min read
ಧಾರವಾಡ: ಕೊರೋನಾ ಸಂದರ್ಭದಲ್ಲಿ ತಮ್ಮ ಜೀವವನ್ನೂ ಲೆಕ್ಕಿಸದೇ ಹೋರಾಡಿದ ವೈದ್ಯರು, ನರ್ಸಗಳು, ಆಶಾಗಳು, ಪೊಲೀಸರು, ಪತ್ರಕರ್ತರು ಸೇರಿದಂತೆ ಹತ್ತು ಜನರಿಗೆ ಧಾರವಾಡದ ಸಾಯಿ ಪದವಿಪೂರ್ವ ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯವು ಕೊರೋನಾ ಸೇನಾನಿ ಪ್ರಶಸ್ತಿ ಪ್ರದಾನ ಮಾಡಿದೆ.
ಧಾರವಾಡದ ಯುವ ಪತ್ರಕರ್ತ ಪ್ರವೀಣ ಓಂಕಾರಿ, ಆಶಾ ಕಾರ್ಯಕರ್ತೆ ಮಹಾದೇವಿ ಜಾಲಿಕಟ್ಟಿ, ಪೌರಕಾರ್ಮಿಕೆ ರೇಷ್ಮಾ ಹವಾಲ್ದಾರ, ಸಂಚಾರ ಠಾಣೆ ಪೊಲೀಸ್ ಸಿದ್ದಪ್ಪ ಹುಗ್ಗಿ, ಸ್ವಯಂ ಸೇವಕಿ ಜಯಶ್ರೀ ಸೊಟಕನಾಳ, ಶುಶ್ರೂಷಕಿ ಆಶಾ ನಾಯಕ, ಸ್ವಯಂ ಸೇವಕ ಡಾ.ಬಾಪುಸಾಬ್ ಮೊರನಕರ, ಸ್ವಯಂ ಸೇವಕರಾದ ಕೆ.ಬಿ.ಮೇಟಿ ಹಾಗೂ ಉಮೇಶ ಮೇಟಿ ಅವರಿಗೆ ಕೊರೋನಾ ಸೇನಾನಿ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿದ ಮಾತನಾಡಿದ ಯುವಪತ್ರಕರ್ತ ಪ್ರವೀಣ್ ಓಂಕಾರಿ, ಲಾಕ್ ಡೌನ ನಂತಹ ಸಂಕಷ್ಟದ ಸ್ಥಿತಿಯಲ್ಲಿ ನಿಜವಾಗಿಯೂ ವಾರಿಯರ್ ಗಳಾಗಿ ಸೇವೆ ಸಲ್ಲಿಸಿದವರು ಪೌರ ಕಾರ್ಮಿಕರು, ಡಾಕ್ಟರಗಳು, ಸರ್ಸ್ ಗಳು ಹಾಗೂ ಪೊಲೀಸರು , ಪತ್ರಕರ್ತರಾದ ನಾವು ಜನರನ್ನು ಜಾಗೃತ ಗೊಳಿಸುವ ನಿಟ್ಟಿನಲ್ಲಿ ಕೆಲಸ ಮಾಡಿದ್ದೇವೆ, ನಮ್ಮ ಸೇವೆಯನ್ನು ಗುರುತಿಸಿ ಶ್ರೀ ಸಾಯಿ ಎಜುಕೇಶನ್ ಸೊಸೈಟಿ ಗುರುತಿಸಿ ನಮ್ಮ ಜವಾಬ್ದಾರಿಯನ್ನು ಇನ್ನಷ್ಟು ಇಮ್ಮಡಿಗೊಳಿಸಿದೆ ಎಂದರು.
ಸ್ವಾಮಿ ವಿವೇಕಾನಂದರ ಜನ್ಮ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಈ ಕಾರ್ಯಕ್ರಮದಲ್ಲಿ ಧಾರವಾಡದ ವಿವೇಕಾನಂದ ಆಶ್ರಮದ ವಿಜಯಾನಂದ ಸರಸ್ವತಿ ಸ್ವಾಮೀಜಿ, ಜಯಂತ ಕೆ.ಎಸ್., ಸಾಯಿ ಕಾಲೇಜಿನ ಅಧ್ಯಕ್ಷೆ ಡಾ.ವೀಣಾ ಬಿರಾದಾರ, ಅನ್ನಪೂರ್ಣಾ ಗುರುಮಠ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.