ಕೊರೋನಾಗೆ ಸರಕಾರಿ ಶಾಲೆ ಶಿಕ್ಷಕ ಬಲಿ- ನಿಲ್ಲದ ಸಾವಿನ ಸರಣಿ
1 min readವಿಜಯಪುರ: ಕ್ರೂರಿ ಮಹಾಮಾರಿ ಕೊರೋನಾಗೆ ಗುಮ್ಮಟನಗರಿಯ ಮತ್ತೋರ್ವ ಶಿಕ್ಷಕ ಬಲಿಯಾಗಿರುವ ಘಟನೆ ವಿಜಯಪುರ ಜಿಲ್ಲೆಯ ತಾಳಿಕೋಟೆ ತಾಲೂಕಿನ ಮೂಕಿಹಾಳ ಗ್ರಾಮದಲ್ಲಿ ನಡೆದಿದೆ. ಮೂಕಿಹಾಳ ಸರಕಾರಿ ಕಿರಿಯ ಪ್ರಾಥಮಿಕ ಉರ್ದು ಶಾಲೆಯ ಶಿಕ್ಷಕ ಮಹ್ಮದ್ ರಫೀಕ್ ಅವಟಿ (50) ಕೋವಿಡ್- 19ಗೆ ಬಲಿಯಾದ ಶಿಕ್ಷಕರಾಗಿದ್ದಾರೆ.
ಕಳೆದ ಒಂದು ತಿಂಗಳಿನಿಂದ ಕೊರೋನಾ ಸೋಂಕಿನಿಂದ ವಿಜಯಪುರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಶಿಕ್ಷಕರು, ಚಿಕಿತ್ಸೆ ಫಲಕಾರಿಯಾಗದೇ ಅಸುನೀಗಿದ್ದಾರೆ.
ಸರಕಾರಿ ಶಾಲೆಯಲ್ಲಿ ಹಲವು ಚಟುವಟಿಕೆಗಳನ್ನ ಹಮ್ಮಿಕೊಂಡು ಸದಾಕಾಲ ಚಟುವಟಿಕೆಯಿಂದ ಇರುತ್ತಿದ್ದ ಶಿಕ್ಷಕರು, ವಿದ್ಯಾಗಮ ಯೋಜನೆಯಲ್ಲಿ ಭಾಗವಹಿಸಿದಾಗಲೇ ಕೊರೋನಾ ಪಾಸಿಟಿವ್ ದೃಢಪಟ್ಟಿತ್ತು. ಇದಾದ ನಂತರ ಚಿಕಿತ್ಸೆಗೆ ದಾಖಲಾಗಿ, ತಿಂಗಳು ಕಳೆದರೂ ಚಿಕಿತ್ಸೆ ಫಲಕಾರಿಯಾಗಿಲ್ಲ.
ಶಿಕ್ಷಕ ಮಹ್ಮದರಫೀಕ ಅವಟಿಯವರ ಸಾವಿನಿಂದ ಶಿಕ್ಷಕ ವಲಯ ಮತ್ತಷ್ಟು ಆತಂಕಕ್ಕೆ ಒಳಗಾಗಿದೆ. ಈಗಾಗಲೇ ಸರಕಾರ ವಿದ್ಯಾಗಮ ಯೋಜನೆಯನ್ನ ತಾತ್ಕಾಲಿಕವಾಗಿ ಬಂದ್ ಮಾಡಿದೆಯಾದರೂ, ಆಗೀನ ಎಫೆಕ್ಟ್ ಶಿಕ್ಷಕರ ಮೇಲೆ ಈಗಲೂ ಮುಂದುವರೆದಿದೆ.