ಅವಳಿನಗರದಲ್ಲಿ ಅಕ್ರಮ ಮರಳು ಸಾಗಾಟ: ಕಮೀಷನರ್ ಲಾಬುರಾಮ್ ಖಡಕ್ ಎಚ್ಚರಿಕೆ
1 min read
ಹುಬ್ಬಳ್ಳಿ: ಅವಳಿನಗರದಲ್ಲಿ ಅಕ್ರಮ ಮರಳು ಸಾಗಾಟ ಮತ್ತು ಓವರಲೋಡ್ ಲಾರಿಗಳ ಸಾಗಾಟದ ಬಗ್ಗೆ ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮೀಷನರ್ ಲಾಬುರಾಮ್ ಅವರು ಖಡಕ್ ಎಚ್ಚರಿಕೆ ನೀಡಿದ್ದಾರೆ.
ನಗರದಲ್ಲಿ ಓವರಲೋಡ್ ಲಾರಿಗಳಿಂದ ರಸ್ತೆಗಳು ಕೂಡಾ ಹದಗೆಡುತ್ತಿವೆ. ಕೆಲವು ಕಡೆ ಅಧಿಕಾರಿಗಳು ಕಿರಿಯ ಅಧಿಕಾರಿಗಳಿಗೆ ಒತ್ತಡ ಹಾಕಿ, ಲಾರಿಗಳನ್ನ ಬಿಡಿಸಿ ಕಳಿಸುತ್ತಿದ್ದಾರೆಂಬ ದೂರಿನ ಬಗ್ಗೆ ಮಾತನಾಡಿದ ಪೊಲೀಸ್ ಕಮೀಷನರ್, ಅಂತಹ ಘಟನೆಗಳು ನಡೆದಿರುವುದು ಕಡಿಮೆ. ಆದರೆ, ಆ ಥರದ ಬಗ್ಗೆ ವಿಚಾರಣೆ ಮಾಡುತ್ತೇನೆ ಎಂದರು.
ಅಕ್ರಮವಾಗಿ ಮರಳು ಸಾಗಾಟದಲ್ಲಿ ಅಧಿಕಾರಿಗಳ ಪಾತ್ರವಿದ್ದರೇ ಅದನ್ನೂ ಚೆಕ್ ಮಾಡುತ್ತೇನೆ. ಬಂದ ದೂರಿನ ಬಗ್ಗೆಯೂ ವಿಚಾರಣೆ ಮಾಡುವುದಾಗಿ ಕಮೀಷನರ್ ಲಾಬುರಾಮ್ ಹೇಳಿದರು.
ಹುಬ್ಬಳ್ಳಿ-ಧಾರವಾಡಕ್ಕೆ ಪ್ರತಿ ದಿನವೂ ನೂರಾರು ಲಾರಿಗಳು ಮರಳು ತುಂಬಿಕೊಂಡು ಬರುತ್ತಿದ್ದು, ಅವುಗಳಲ್ಲಿ ಬಹುತೇಕ ಅಕ್ರಮವಾಗಿಯೇ ಸಾಗಾಟ ಮಾಡುತ್ತಿವೆ ಎಂಬ ದೂರಿದೆ. ಅಷ್ಟೇ ಅಲ್ಲ, ಪಾಸ್ ಇಲ್ಲದೇ ಲಾರಿಗಳನ್ನ ಓಡಿಸಿಕೊಂಡು ಮಾರಾಟ ಮಾಡುತ್ತಿದ್ದಾರೆಂಬ ಆರೋಪಗಳು ಇವೆ. ಇದನ್ನೇಲ್ಲ ಕಮೀಷನರ್ ಪರಿಗಣನೆಗೆ ತೆಗೆದುಕೊಳ್ಳುತ್ತಾರೆಂಬ ನಂಬಿಕೆ ನಾಗಕರಿದ್ದು.