Posts Slider

Karnataka Voice

Latest Kannada News

ಎಂಎಲ್ಸಿ ಚುನಾವಣೆಯಲ್ಲಿ ಕಾಂಗ್ರೆಸ್ ಮುಖಂಡೆ ಎರಡೆರಡು ಓಟ ಹಾಕಿದ್ರಾ..? ಆಘಾತಗೊಂಡ ಪ್ರಮುಖರು..!

1 min read
Spread the love

ಹುಬ್ಬಳ್ಳಿ: ಕಳೆದ ಬಾರಿ ವಿಧಾನಪರಿಷತ್ ಚುನಾವಣೆಯಲ್ಲಿ ನಾನು ಎರಡು ಮತ ಕೇಂದ್ರಗಳಲ್ಲಿ ಮತ ಹಾಕಿದ್ದೆ… ಎಂದು ಮಹಿಳಾ ಮುಖಂಡರೋರ್ವರು ಹೇಳಿತ್ತಿದ್ದಂತೆಯೇ ಕಾಂಗ್ರೆಸ್ ಪಕ್ಷದ ಸಭೆಯಲ್ಲಿದ್ದ ಬಹುತೇಕ ನಾಯಕರು‌ ಕೆಲ ಕ್ಷಣ ತಬ್ಬಿಬ್ಬಾದರಲ್ಲದೆ, ಏನು‌ಹೇಳಬೇಕು ಎಂದು ತಿಳಿಯದೆ ಕೈ ಕೈ ಹಿಚುಕಿಕೊಂಡು‌ ಮೌನಕ್ಕೆ ಶರಣಾದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಶಕ್ತಿಸೌಧದಲ್ಲಿ ಶಾಸಕರ ಸಭೆಗಳನ್ನು ನಡೆಸಿದ ಅನುಭವಹೊಂದಿದ‌ ಮಾಜಿ‌ ವಿಧಾನಪರಿಷತ್ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ. “ರೀ ಹಾಗೆಲ್ಲ ಹೇಳುವುದು ಕಾನೂನು ಬಾಹಿರ, ತಪ್ಪು” ಎಂದು ಹೇಳಿದರು. ಹಿರಿಯರ ಸಲಹೆ ಬರುತ್ತಿದ್ದಂತೆಯೇ ಮಹಿಳಾ ಮುಖಂಡೆ “ಹೌದಾ, is it? ಎಂದು ಹೇಳಿ, ಎಲ್ಲ ಹೇಳೇ ಬಿಟ್ಟೆಅಲ್ಲಾ ನಾನು” ಅಂದಾಗ ಸಭೆಯಲ್ಲಿದ್ದ ಬಹುತೇಕರು ನಕ್ಕರೆ, ನಾಯಕರುಗಳು‌ ಮಾತ್ರ ಈ ಸಂಬಂಧಿಸಿದ ವೀಡಿಯೊ ವೈರಲ್ ಆಗದಿದ್ದರೆ ಸಾಕು ಅಂದ್ರಂತೆ.


Spread the love

More Stories

Leave a Reply

Your email address will not be published. Required fields are marked *

You may have missed