ಬಾಡದ ಬಳಿ ಕಾರು-ಟ್ರ್ಯಾಕ್ಟರ್ ಡಿಕ್ಕಿ: ನಾಲ್ವರು ಯುವಕರ ಸ್ಥಿತಿ ಗಂಭೀರ
1 min readಧಾರವಾಡ: ಎರಡು ಖಾಲಿ ಟೇಲರ್ ಹೊಂದಿದ್ದ ಕಬ್ಬು ಸಾಗಾಣಿಕೆ ಮಾಡುವ ಟ್ರ್ಯಾಕ್ಟರ್ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ನಾಲ್ಕು ಯುವಕರು ಗಂಭೀರವಾಗಿ ಗಾಯಗೊಂಡ ಘಟನೆ ಧಾರವಾಡ ತಾಲೂಕಿನ ಬಾಡ ಕ್ರಾಸ್ ಬಳಿ ಸಂಭವಿಸಿದೆ.
ಎರಡು ಟೇಲರ್ ಇದ್ದಿದ್ದನ್ನ ಗಮಿನಿಸದೇ ಕಾರು ಚಲಾಯಿಸಿದ ಪರಿಣಾಮ ಘಟನೆ ನಡೆದಿದ್ದು, ಕಾರಿನಲ್ಲಿದ್ದ ನಾಲ್ವರು ಗಾಯಗೊಂಡಿದ್ದಾರೆ. ತೀವ್ರವಾಗಿ ಗಾಯಗೊಂಡಿರುವ ನಾಲ್ವರನ್ನೂ ಜಿಲ್ಲಾಸ್ಪತ್ರೆಗೆ ರವಾನೆ ಮಾಡಲಾಗಿದೆ.
ದಾಂಡೇಲಿ ಮೂಲದ ಯುವಕರು ಕಾರಿನಲ್ಲಿ ಬರುವಾಗ ದುರ್ಘಟನೆ ನಡೆದಿದ್ದು, ಕಾರಿನ ಮುಂಭಾಗ ಸಂಪೂರ್ಣವಾಗಿ ಜಖಂಗೊಂಡಿದ್ದು, ಟ್ರ್ಯಾಕ್ಟರ್ ನ ಮುಂಭಾಗವೂ ಜಖಂಗೊಂಡಿದೆ.
ಗ್ರಾಮಿಣ ಠಾಣೆಯ ಪೊಲೀಸರು ಸ್ಥಳಕ್ಕೆ ಆಗಮಿಸಿ, ಗಾಯಾಳುಗಳನ್ನ ಆಸ್ಪತ್ರೆಗೆ ರವಾನೆ ಮಾಡಲಾಗಿದ್ದು, ಟ್ರ್ಯಾಕ್ಟರ್ ಚಾಲಕನನ್ನ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.