Posts Slider

Karnataka Voice

Latest Kannada News

ಧಾರವಾಡದಲ್ಲಿ ಸಿಕ್ಕರು ಕಳ್ಳರು- 17 ಬೈಕ್ ವಶ- ನೂತನ ಸಿಪಿ ಲಾಬು ರಾಮ್ ಎಫೆಕ್ಟ್

1 min read
Spread the love

ಧಾರವಾಡ: ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡ 24 ಗಂಟೆಯಲ್ಲೇ ಐಪಿಎಸ್ ಲಾಬು ರಾಮ್ ಮಾರ್ಗದರ್ಶನದಲ್ಲಿ ಇಬ್ಬರು ಬೈಕ್ ಕಳ್ಳರನ್ನ ಹಿಡಿಯುವಲ್ಲಿ ವಿದ್ಯಾಗಿರಿ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ.

ಧಾರವಾಡ ರಾಜೀವಗಾಂಧಿ ನಗರದ ನಿವಾಸಿ ಗೌಂಡಿ ಕೆಲಸ ಮಾಡುವ ಅಭಿಷೇಕ ರಾಜೇಶ ಸಂಗ್ಪಾಳೆ ಹಾಗೂ ಚಾಲಕನಾಗಿ ಕಾರ್ಯನಿರ್ವಹಿಸುವ ರಾಜೀವಗಾಂಧಿನಗರದ ನಿವಾಸಿ ಈರನಗೌಡ ಈರಣ್ಣ ಮರಿಗೌಡಕೋಣಿ ಬಂಧಿತ ಆರೋಪಿಗಳಾಗಿದ್ದು, ಬಂಧಿತರಿಂದ 17 ಹೀರೋ ಹೊಂಡಾ ಕಂಪನಿಯ ವಿವಿಧ ಮೋಟಾರ ಸೈಕಲ್ ಗಳನ್ನ ವಶಕ್ಕೆ ಪಡೆಯಲಾಗಿದೆ.

17 ಬೈಕಿನ ಒಟ್ಟು ಮೌಲ್ಯ 8ಲಕ್ಷ ರೂಪಾಯಿ ಎಂದು ಅಂದಾಜು ಮಾಡಲಾಗಿದೆ. ಹುಬ್ಬಳ್ಳಿಯ ಅರವಿಂದನಗರ, ಶಂಕರಮಠ ಹತ್ತಿರ, ಕೇಶ್ವಾಪುರ ಸೇರಿದಂತೆ ಹಲವು ಪ್ರದೇಶಗಳಲ್ಲಿ ನಡೆದಿದ್ದ ಕಳ್ಳತನ ಪ್ರಕರಣಗಳು ಪತ್ತೆಯಾಗಿವೆ.

ವಿದ್ಯಾಗಿರಿ ಠಾಣೆ ಇನ್ಸಪೆಕ್ಟರ್ ಎಂ.ಕೆ.ಬಸಾಪುರ ತಂಡವನ್ನ ರಚನೆ ಮಾಡಿದ್ದು, ತಂಡದಲ್ಲಿ ಪಿಎಸ್ಐ ಸಚಿನಕುಮಾರ ದಾಸರಡ್ಡಿ, ಎಸ್.ಆರ್.ತೇಗೂರ, ಎಎಸ್ಐ ಬಿ.ಎಂ.ಅಂಗಡಿ ಸಿಬ್ಬಂದಿಗಳಾದ ಎ.ಬಿ.ನರೇಂದ್ರ, ಎಂ.ಎಫ್.ನದಾಫ, ಐ.ಪಿ.ಬುರ್ಜಿ, ಆರ್.ಕೆ.ಅತ್ತಾರ, ಎಂ.ಸಿ.ಮಂಕಣಿ, ಬಿ.ಎಂ.ಪಠಾತ, ಎಂ.ಜಿ.ಪಾಟೀಲ, ಡಿ.ಎಸ್.ಸಾಂಗ್ಲೀಕರ, ಎ.ಎಂ.ಹುಯಿಲಗೋಳ ಕಾರ್ಯಾಚರಣೆ ನಡೆಸಿ, ಆರೋಪಿಗಳನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಪೊಲೀಸ್ ಆಯುಕ್ತರು ಕಾರ್ಯವನ್ನ ಶ್ಲಾಘಿಸಿ, ಬಹುಮಾನ ಘೋಷಿಸಿದ್ದಾರೆ.


Spread the love

Leave a Reply

Your email address will not be published. Required fields are marked *