ರಾಜ್ಯದ ಬಿಜೆಪಿ ಶಾಸಕನ ಪತ್ನಿಯ ಕಾರು ಕ್ರಿಕೆಟ್ ಬೆಟ್ಟಿಂಗನಲ್ಲಿ ಸೀಜ್
1 min read
ಕಲಬುರಗಿ: ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಬೆಟ್ಟಿಂಗ್ ಆರೋಪದ ಮೇಲೆ ಕಲಬುರಗಿ ಗ್ರಾಮೀಣ ಶಾಸಕ ಬಸವರಾಜ ಮತ್ತಿಮೂಡ ಪತ್ನಿಯ ಹೆಸರಿನಲ್ಲಿದ್ದ ಪೊಲೀಸರು ಜಪ್ತಿ ಮಾಡಿದ್ದು, ಐಪಿಎಲ್ ಬೆಟ್ಟಿಂಗ್ ಹಣವನ್ನ ನೀಡುವ ವೇಳೆ ಕಾರನ್ನ ಜಪ್ತಿ ಮಾಡಲಾಗಿದೆ.
ಮಹಾರಾಷ್ಟ್ರದ ಬೆಟ್ಟಿಂಗ್ ಪ್ರಕರಣದಲ್ಲಿ ಚೇತನ ಬನ್ಸಾಲ್ ಹಾಗೂ ವಿಘ್ನೇಶ ಎಂಬುವವರನ್ನ ಅಲ್ಲಿನ ಪೊಲೀಸರು ಬಂಧಿಸಿದ್ದರು. ಇವರಿಬ್ಬರು ನೀಡಿದ ಮಾಹಿತಿಯ ಮೇರೆಗೆ ಕಲಬುರಗಿಯಲ್ಲಿ ದಾಳಿ ಮಾಡಿದಾಗ ಕಲಬುರಗಿ ಎಂಬಿ ನಗರದ ಅತುಲ್ ಹಾಗೂ ಪ್ರದೀಪ ಕಾರಂಜೆ ಎಂಬುವವರನ್ನ ಬಂಧನ ಮಾಡಲಾಗಿದೆ.
ಬಂಧಿತರಿಂದ 38.44. ಲಕ್ಷ ನಗದು ಹಣ, ನಾಲ್ಕು ಲ್ಯಾಪಟಾಪ್, ಟಿವಿ ಹಾಗೂ ಎರಡು ಕಾರು ಮತ್ತು ಒಂದು ಸ್ಕೂಟರನ್ನ ಮಹಾರಾಷ್ಟ್ರದ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇದೇ ಸಮಯದಲ್ಲಿ ಬಿಜೆಪಿ ಶಾಸಕ ಬಸವರಾಜ ಮತ್ತಿಮೂಡ ಪತ್ನಿ ಜಯಶ್ರೀ ಹೆಸರಿನಲ್ಲಿರುವ ಇನ್ನೋವ್ವಾ ಕ್ರಿಸ್ಟಾ ಕಾರು (ನಂಬರ= ಕೆಎ-51, ಎಂಪಿ 9955 ವಾಹನವನ್ನೂ ಸೊಲ್ಲಾಪುರ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬೆಟ್ಟಿಂಗ್ ದಂಧೆಯಲ್ಲಿ ಇನ್ನೂ ಹಲವರು ಭಾಗಿಯಾಗಿದ್ದು, ಪೊಲೀಸರ ಕಾರ್ಯಾಚರಣೆ ಮುಂದುವರೆದಿದೆ. ಘಟನೆಯಲ್ಲಿ ಶಾಸಕ ಪತ್ನಿಯ ಹೆಸರಿನಲ್ಲಿರುವ ಕಾರು ವಶಕ್ಕೆ ಪಡೆದಿದ್ದರಿಂದ, ಶಾಸಕರ ರಾಜೀನಾಮೆಗೆ ಹಲವರು ಆಗ್ರಹಿಸಿದ್ದಾರೆ.