ಹುಬ್ಬಳ್ಳಿ ಸಮೀಪ ಬೆಳಗಲಿ ಕ್ರಾಸ್ ಬಳಿ ದುರ್ಘಟನೆ: ಮೂವರಿಗೆ ಗಂಭೀರ ಗಾಯ
1 min read
ಹುಬ್ಬಳ್ಳಿ: ಹೆರಿಗೆಯಾಗಿದ್ದ ಹೆಂಡತಿ ಹಾಗೂ ಮಗುವನ್ನ ನೋಡಲು ಹುಬ್ಬಳ್ಳಿಗೆ ಬರುತ್ತಿದ್ದ ಸಮಯದಲ್ಲಿ ಬೈಕ್ ಹಾಗೂ ಟ್ರ್ಯಾಕ್ಟರ್ ನಡುವೆ ನಡೆದ ದುರ್ಘಟನೆಯಲ್ಲಿ ಮೂವರಿಗೆ ತೀವ್ರ ಥರದ ಗಾಯಗಳಾಗಿದ್ದು, ಓರ್ವನ ಮುಂಗೈ ಕತ್ತರಿಸಿ ಕೆಳಗೆ ಬಿದ್ದಿದೆ.
ಹುಬ್ಬಳ್ಳಿಯಿಂದ 7 ಕಿಲೋಮೀಟರ ದೂರದಲ್ಲಿರುವ ಬೆಳಗಲಿ ಕ್ರಾಸ್ ಬಳಿ ನಡೆದ ಘಟನೆಯಲ್ಲಿ ಹಾವೇರಿ ಜಿಲ್ಲೆಯ ಶಿಗ್ಗಾಂವ ತಾಂಡಾದ ನಿವಾಸಿ ಕುಮಾರ, ಆತನ ಜೊತೆಗಿದ್ದ ಉಮೇಶ ಹಾಗೂ ಸೋಮಣ್ಣನಿಗೂ ಗಾಯಗಳಾಗಿದ್ದು, ಕಿಮ್ಸಗೆ ರವಾನೆ ಮಾಡಲಾಗಿದೆ.
ಹುಬ್ಬಳ್ಳಿಯ ಕಿಮ್ಸನಲ್ಲಿ ನಿನ್ನೆ ಕುಮಾರನ ಮಡದಿಯ ಹೆರಿಗೆ ಆಗಿತ್ತು. ಅದೇ ಖುಷಿಯಲ್ಲಿ ಗೆಳೆಯರೊಂದಿಗೆ ಬರುತ್ತಿದ್ದ ಸಮಯದಲ್ಲಿ ಈ ಘಟನೆ ನಡೆದಿದೆ. ಬೈಕಿಗೆ ಟ್ರ್ಯಾಕ್ಟರ್ ಡಿಕ್ಕಿ ಹೊಡೆದ ಪರಿಣಾಮ ಮೂವರು ರಸ್ತೆಯುದ್ದಕ್ಕೂ ಬಿದ್ದಿದ್ದು, ರಸ್ತೆ ತುಂಬ ರಕ್ತದ ಚೆಲ್ಲಿತ್ತು.
ಸ್ಥಳದಲ್ಲಿಯೇ ಓರ್ವನ ಮುಂಗೈ ಕತ್ತರಿಸಿ ಕೆಳಗೆ ಬಿದ್ದಿದ್ದು, ಕೈ ಸಮೇತ ಕಿಮ್ಸಗೆ ರವಾನೆ ಮಾಡಲಾಗಿದೆ. ಪ್ರಕರಣ ಹುಬ್ಬಳ್ಳಿ ಗ್ರಾಮೀಣ ಠಾಣೆಯಲ್ಲಿ ದಾಖಲಾಗಿದೆ.