ಹುಬ್ಬಳ್ಳಿಯಲ್ಲಿ ಆಟೋ ಡಿಕ್ಕಿ ಸ್ಥಳದಲ್ಲಿಯೇ ಚಾಲಕ ಸಾವು
1 min read
ಹುಬ್ಬಳ್ಳಿ: ಕುಡಿದ ಅಮಲಿನಲ್ಲಿ ಆಟೋರಿಕ್ಷಾ ಚಲಾಯಿಸುತ್ತಿದ್ದ ವೇಳೆಯಲ್ಲಿ ಆಟೋ ನಿಯಂತ್ರಣ ತಪ್ಪಿ ಗುಂಡಿಯಲ್ಲಿ ಬಿದ್ದ ಪರಿಣಾಮ ವ್ಯಕ್ತಿಯೋರ್ವ ಸ್ಥಳದಲ್ಲಿಯೇ ಸಾವಿಗೀಡಾದ ಘಟನೆ ಮಂಟೂರ ರಸ್ತೆಯ ಎಫ್ ಸಿಐ ಗೋಡೌನ್ ಸಮೀಪ ನಡೆದಿದೆ.
ಆಟೋರಿಕ್ಷಾದಲ್ಲಿದ್ದ ಸದಾನಂದ ಮೈದಾರಗಿ ಎಂಬಾತನೇ ಸಾವಿಗೀಡಾಗಿದ್ದು, ವಾಹನ ಬಿದ್ದ ರಭಸಕ್ಕೆ ತಲೆಗೆ ಬಲವಾದ ಪೆಟ್ಟು ಬಿದ್ದಿದೆ. ಇದರಿಂದ ಸ್ಥಳದಲ್ಲಿಯೇ ತೀವ್ರವಾದ ರಕ್ತಸ್ರಾವವಾಗಿದ್ದು, ಕಿಮ್ಸಗೆ ತರುವ ಮುನ್ನವೇ ಪ್ರಾಣ ಹೋಗಿದೆ.
ರೇಲ್ವೆ ನಿಲ್ದಾಣದ ಬಳಿ ನಿಲ್ಲಿಸಿದ್ದ ಆಟೋದಲ್ಲಿ ಗ್ರಾಹಕರನ್ನ ಕರೆದುಕೊಂಡು ಹೋಗಿ, ಮಂಟೂರ ರಸ್ತೆಯ ಬಳಿ ಬಿಟ್ಟು ಮರಳಿ ಬರುವಾಗ ದುರ್ಘಟನೆ ಸಂಭವಿಸಿದೆ. ಘಟನೆಯ ಬಗ್ಗೆ ಸಾರ್ವಜನಿಕರೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸುಮಾರು ಹೊತ್ತು ಗುಂಡಿಯಲ್ಲಿ ಬಿದ್ದ ಪರಿಣಾಮ ಅಲ್ಲಿಯೇ, ಸದಾನಂದ ಗಂಭೀರವಾಗಿ ಗಾಯಗೊಂಡಿದ್ದಾನೆ.. ಇದೇ ಕಾರಣದಿಂದ ಕಿಮ್ಸನಲ್ಲಿ ಚಿಕಿತ್ಸೆ ನೀಡುವ ಮುನ್ನವೇ ಪ್ರಾಣ ಹೋಗಿದೆ. ಈ ಬಗ್ಗೆ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ಕ್ರಮವನ್ನ ಜರುಗಿಸಲಾಗಿದೆ.