ಲೋಕೂರ ಪೈಲ್ವಾನ್ ಎಎಸ್ಐ ರಂಜಾನಸಾಬರಿಗೆ ಸಿಎಂ ಮೆಡೆಲ್
1 min read
ಧಾರವಾಡ: ತನ್ನ ಪೈಲ್ವಾಗಿರಿಯಿಂದಲೇ ಎಲ್ಲರಿಗೂ ಪರಿಚಿತರಾಗಿರುವ ಉಪನಗರ ಠಾಣೆಯ ಎಎಸ್ಐ ಅವರಿಗೆ ಉತ್ತಮ ಕಾರ್ಯಕ್ಕಾಗಿ ಮುಖ್ಯಮಂತ್ರಿಗಳ ಪದಕ ಲಭಿಸಿದ್ದು, ಇಂದು ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಧಾನ ನಡೆಯಿತು.
ಹುಬ್ಬಳ್ಳಿ-ಧಾರವಾಡದ ಹಲವು ಪೊಲೀಸ್ ಠಾಣೆಗಳಲ್ಲಿ ಕಾರ್ಯನಿರ್ವಹಿಸಿರುವ ರಂಜಾನಸಾಬ ನದಾಫ ಅವರು ಇದೀಗ ಧಾರವಾಡದ ಉಪನಗರ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
ಮೂಲತಃ ಧಾರವಾಡ ತಾಲೂಕಿನ ಲೋಕೋರದಲ್ಲಿನ ಇವರನ್ನ ಬಹುತೇಕರು ಗುರುತಿಸುವುದು ಪೈಲ್ವಾನ್ ಎಂದೇ. ಇದೀಗ ಮುಖ್ಯಮಂತ್ರಿಗಳ ಪದಕ ಲಭಿಸಿದ್ದು, ರಂಜಾನಸಾಬರ ಕಾರ್ಯಕ್ಷಮತೆಯನ್ನ ತೋರಿಸುವಂತಿದೆ.