ತೀರ್ಲಾಪುರ ಗ್ರಾಮದಲ್ಲಿ ಮಾಜಿ ಮುಖ್ಯ ಸಚೇತಕ ಬಂದು ಮಾಡಿದ್ದೇನು..!
1 min read
ಧಾರವಾಡ: ಕರ್ನಾಟಕ ವಿಧಾನಸಭೆಯ ಮುಖ್ಯ ಸಚೇತಕರಾಗಿದ್ದ ಮಾಜಿ ಶಾಸಕ ಅಶೋಕ ಪಟ್ಟಣ, ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ತೀರ್ಲಾಪುರ ಗ್ರಾಮಕ್ಕೆ ಶ್ರೀ ವೀರೇಶ ಸೊಬರದಮಠ ಆಶ್ರಮಕ್ಕೆ ಭೇಟಿ ನೀಡಿದ್ದರು.
ವೀರೇಶ್ ಸೊಬರದಮಠ್ ಸ್ವಾಮಿಗಳ ತಂದೆ ಇನ್ನಿಲ್ಲವಾಗಿದ್ದರಿಂದ ಮಾಜಿ ಮುಖ್ಯ ಸಚೇತಕ ಹಾಗೂ ಮಾಜಿ ಶಾಸಕ ಅಶೋಕ ಪಟ್ಟಣ ಭೇಟಿ ಮಾಡಿ ಸಾಂತ್ವನ ಹೇಳಿದರು. ಸದಾಕಾಲ ಹೋರಾಟದಲ್ಲಿ ತೊಡಗಿಸಿಕೊಂಡಿರುವ ಸೊಬರದಮಠ ಅವರಿಗೆ ತಂದೆಯ ಆಶೀರ್ವಾದವೇ ಮೂಲ ಕಾರಣವಾಗಿತ್ತು ಎನ್ನುವುದನ್ನ ಹೇಳಿದರು.
ಕಳಸಾ-ಬಂಡೂರಿ ಮಹದಾಯಿ ಹೋರಾಟದಲ್ಲಿ ತಮ್ಮನ್ನ ಸಮರ್ಪಣೆ ಮಾಡಿಕೊಂಡ ವೀರೇಶ ಸೊಬರದಮಠ ಅವರೊಂದಿಗೆ ಕೆಲಕಾಲ ಸಮಯ ಕಳೆದ ಅಶೋಕ ಪಟ್ಟಣ, ತಂದೆಯವರ ನಿಧನದಿಂದ ಆಗಿರುವ ನಷ್ಟವನ್ನ ಭರಿಸಲು ಆಗುವುದಿಲ್ಲ. ನಿಮ್ಮ ದುಃಖವನ್ನ ಭರಿಸುವ ಶಕ್ತಿಯನ್ನ ನೀಡಲಿ ಎಂದು ಕೇಳಿಕೊಂಡರು.
ನವಲಗುಂದ ಕ್ಷೇತ್ರದ ಪ್ರಮುಖ ಹಾಗೂ ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ವಿನೋದ ಅಸೂಟಿ ಈ ಸಮಯದಲ್ಲಿ ಉಪಸ್ಥಿತರಿದ್ದರು.