ಕಮರಿಪೇಟೆಯಲ್ಲಿ ಅಂದರ್-ಬಾಹರ್: ಇನ್ಸಪೆಕ್ಟರ್ ಬುದ್ನಿ ನೇತೃತ್ವದಲ್ಲಿ ದಾಳಿ
1 min read
ಹುಬ್ಬಳ್ಳಿ: ಕಮರಿಪೇಟೆಯ ಜಿ ಅಡ್ಡ ಇಮಾಮಹುಸೇನ ಕುಣಬಿಯವರ ಮನೆಯ ಹಿಂದೆಯಿರುವ ವಿದ್ಯುತ್ ಕಂಬದ ಕೆಳಗಡೆ ಅಂದರ್-ಬಾಹರ್ ಆಡುತ್ತಿದ್ದ ಐವರನ್ನ ಬಂಧನ ಮಾಡುವಲ್ಲಿ ಕಮರಿಪೇಟೆ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಕ್ಯಾಟರಿಂಗ್ ಮಾಡುತ್ತಿದ್ದ ಸುರೇಂದ್ರ ಅರಸಿದ್ಧಿ, ಖಾಸಗಿ ನೌಕರಗಳಾದ ಸುಶೀಲ ಭರತಸಾ ದಲಭಂಜನ, ಪ್ರಭು ಪಾಟೀಲ, ಆಟೋ ಚಾಲಕ ರವಿ ನಾರಾಯಣಸಾ ಕಾಟೇಗರ ಹಾಗೂ ಜಿ ಅಡ್ಡದ ದೀಪಕ ಗಂಗಾಧರಸಾ ಕಠಾರೆ ಎಂಬುವವರನ್ನ ಬಂಧನ ಮಾಡಲಾಗಿದೆ.
ಬಂಧಿತರಿಂದ 15120 ರೂಪಾಯಿ ಹಣ ಹಾಗೂ ಇಸ್ಪೀಟ್ ಎಲೆಗಳನ್ನ ವಶಕ್ಕೆ ಪಡೆಯಲಾಗಿದ್ದು, ಗುರುಶಿದ್ಧೇಶ್ವರ ನಗರದಲ್ಲಿ ದಾಳಿ ನಡೆದಿದ್ದು, ಆರೋಪಿಗಳನ್ನ ಬಂಧನ ಮಾಡಲಾಗಿದೆ.
ಇನ್ಸಪೆಕ್ಟರ್ ಬಿ.ಟಿ.ಬುದ್ನಿ ನೇತೃತ್ವದಲ್ಲಿ ದಾಳಿ ನಡೆದಿದ್ದು, ಆರೋಪಿತರ ವಿರುದ್ಧ ಕಾನೂನು ಕ್ರಮ ಜರುಗಿಸಿದ್ದಾರೆ.