ಹುಬ್ಬಳ್ಳಿಯ ಆರೀಫ ಪಲ್ಲಾ, ಮುಜ್ಜು ಬಂಧನ
1 min read
ಹುಬ್ಬಳ್ಳಿ: ತಾಲೂಕಿನ ನೂಲ್ವಿ ಗ್ರಾಮದ ಅಂಚಿಕಟ್ಟಿ ಕರೆಯ ದಂಡೆಯ ಮೇಲೆ ಅಂದರ್-ಬಾಹರ್ ಆಡುತ್ತಿದ್ದ ಆರು ಜನರನ್ನ ಬಂಧನ ಮಾಡುವಲ್ಲಿ ಹುಬ್ಬಳ್ಳಿ ಗ್ರಾಮೀಣ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಬಂಧಿತರನ್ನ ಹಳೇಹುಬ್ಬಳ್ಳಿ ಇಸ್ಲಾಂಪುರ ನಿವಾಸಿಗಳಾದ ಆರೀಫಭಾಷಾ ಪಲ್ಲಾ, ಮುಜಮುಲ್ಲ ಉರ್ಫ್ ಮುಜ್ಜು ಮಾಬುಸಾಬ ಬೇಪಾರಿ, ಮುನೀರ ಇಬ್ರಾಹಿಂಸಾಬ ಬೇಪಾರಿ, ಸಿಕಂದರ ಮನಿಯಾರ ದೊಡ್ಡಮನಿ, ಪಾರೂಖ ಬೇಪಾರಿ ಹಾಗೂ ಬಾಷಾ ಬೇಪಾರಿ ಎಂದು ಗುರುತಿಸಲಾಗಿದೆ.
ಬಂಧಿತ ಜೂಜುಕೋರರಿಂದ 9200 ರೂಪಾಯಿಗಳನ್ನ ವಶಕ್ಕೆ ಪಡೆಯಲಾಗಿದೆ. ಶಹರ ಪ್ರದೇಶದಿಂದ ಹೊರಗಡೆ ಹೋಗಿ ಅಲ್ಲಿ ನಿರಂತರವಾಗಿ ಜಾಗವನ್ನ ಬದಲಾವಣೆ ಮಾಡಿಕೊಂಡಿದ್ದ ಅಂದರ್-ಬಾಹರ್ ಆಡುತ್ತಿದ್ದ ತಂಡ, ಕೊನೆಗೂ ಪೊಲೀಸರ ಬಲೆಗೆ ಬಿದ್ದಿದೆ.
ಹುಬ್ಬಳ್ಳಿ ಗ್ರಾಮೀಣ ಠಾಣೆಯ ಪ್ರಕರಣ ದಾಖಲಾಗಿದ್ದು, ಇನ್ನೂ ಕೆಲವರ ಬಗ್ಗೆ ಬಂಧಿತರಿಂದ ಮಾಹಿತಿಯನ್ನ ಪಡೆಯಲಾಗುತ್ತಿದೆ.