ಮೇಡಂ ತುಮಾರಾ ಪ್ಹಾಂವ್ ಪಡ್ತೇ… ಎಸಿಪಿ ಅನುಷಾರ ಮುಂದೆ ‘ಆ’ ಮಹಿಳೆಯರು
1 min read
ಧಾರವಾಡ: ಸಂಗಮ ವೃತ್ತದಲ್ಲಿ ಬೆಂಗಳೂರಿನ ಪೊಲೀಸರಿಂದ ಬಂಧನಕ್ಕೆ ಒಳಗಾಗುವ ಸಮಯದಲ್ಲಿ ಪೊಲೀಸರ ಮೇಲೆ ಹಲ್ಲೆ ಮಾಡಿದ ಇರಾಣಿ ಗ್ಯಾಂಗಿನ ಸಂಬಂಧಿತ ಮಹಿಳೆಯರು ಧಾರವಾಡ ಶಹರ ಪೊಲೀಸ್ ಠಾಣೆಗೆ ಆಗಮಿಸಿ, ಎಸಿಪಿಯವರಿಗೆ ತಮ್ಮ ಅಹವಾಲು ಹೇಳಿಕೊಂಡರು.
ಇಂದು ಮಧ್ಯಾಹ್ನ ಬೆಂಗಳೂರಿನ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿರುವ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಪಿಎಸೈ ಸಂತೋಷ ಸೇರಿದಂತೆ ಮೂವರು ಸಿಬ್ಬಂದಿಗಳು ತನಿಖೆಗಾಗಿ ಬಂದಾಗ, ಸಂಶಯಿತರು ಎದುರಿಗೆ ಕಂಡು ಬಂದಿದ್ದರು. ತಕ್ಷಣವೇ ಅವರನ್ನ ಹಿಡಿದುಕೊಂಡಾಗ, ಹಲವರು ಕೂಡಿಕೊಂಡು ಪೊಲೀಸರ ಮೇಲೆ ಹಲ್ಲೆ ಮಾಡಿದ್ರು.
ಇದೇ ಘಟನೆಯಲ್ಲಿ ತಮಗೆ ಅನ್ಯಾಯವಾಗುತ್ತಿದೆ. ಯಾರ್ ಯಾರೋ ಬಂದು ನಮ್ಮ ಮಕ್ಕಳನ್ನ ಕರೆದುಕೊಂಡು ಹೋಗ್ತಾರೆ. ನಮಗೆ ಹೇಳಿ, ಕಳ್ಳತನ ಮಾಡಿದ್ರೇ ನಾವೇ ನಿಮಗೆ ಅವರನ್ನ ಒಪ್ಪಿಸುತ್ತೇವೆ ಎಂದು ಎಸಿಪಿ ಅನುಷಾ ಅವರಿಗೆ ಹೇಳುವ ಪ್ರಯತ್ನವನ್ನ ಮಾಡಿದ್ರು.
ಅಸಲಿಗೆ ಇರಾಣಿ ಗ್ಯಾಂಗಿನ ಬಹುತೇಕ ಮಹಿಳೆಯರು ಹೀಗೆಲ್ಲ ಮಾಡುವುದು ಸಹಜ. ನಡೆದಿರುವ ಆರೋಪಗಳನ್ನ ನಿರಾಕರಣೆ ಮಾಡುತ್ತಲೇ ಇರುತ್ತಾರೆ ಎಂಬ ಮಾಹಿತಿ ಮೊದಲೇ ಎಸಿಪಿಯವರಿಗೆ ಇದ್ದಿದ್ದರಿಂದ ಮಹಿಳೆಯರ ಅಹವಾಲು ಕೇಳಿ ಕಳುಹಿಸಿದರು.