ರಾಣೆಬೆನ್ನೂರು: ಕೊರೋನಾ ಔಷಧದ ಕ್ಯಾಂಟರಗೆ ಲಾರಿ ಡಿಕ್ಕಿ: ಓರ್ವನ ಸಾವು
1 min read
ಹಾವೇರಿ: ನಿಂತಿದ್ದ ಲಾರಿಗೆ ಹಿಂಬದಿಯಿಂದ ಕ್ಯಾಂಟರ್ ಡಿಕ್ಕಿ ಹೊಡೆದ ಪರಿಣಾಮ ಓರ್ವ ಸ್ಥಳದಲ್ಲಿಯೇ ಸಾವಿಗೀಡಾದ ಘಟನೆ ಹಾವೇರಿ ಜಿಲ್ಲೆಯ ರಾಣೆಬೆನ್ನೂರ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 4 ರಲ್ಲಿ ನಡೆದಿದೆ.
ದಾವಣಗೆರೆಯತ್ತ ಕೊರೋನಾಗೆ ಸಂಬಂಧಿಸಿದ ಔಷಧಿಗಳನ್ನ ತೆಗೆದುಕೊಂಡು ಹೋಗುತ್ತಿದ್ದ ಕ್ಯಾಂಟರನಲ್ಲಿದ್ದ ಗದಗ ಮೂಲದ ಹನುಮಂತಪ್ಪ ಈಶ್ವರಪ್ಪ ಮೇಲಿನಮನಿ ಘಟನೆಯಲ್ಲಿ ಸಾವಿಗೀಡಾಗಿದ್ದಾನೆ.
ಹಾವೇರಿ ಬಳಿ ಬೆಳಿಗ್ಗೆಯಷ್ಟೇ ಕ್ಯಾಂಟರನಲ್ಲಿ ಪ್ರಯಾಣಿಕನಾಗಿ ಹತ್ತಿದ್ದ ವ್ಯಕ್ತಿಯೇ ಸಾವಿಗೀಡಾಗಿದ್ದು, ಕ್ಯಾಂಟರ್ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಘಟನೆಗೆ ಸಂಬಂಧಿಸಿದಂತೆ ರಾಣೆಬೆನ್ನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.