ಧಾರವಾಡ “ಸರೌಂಡಿಂಗ್” 4ಅವಘಡ, ಮೂವರ ದುರ್ಮರಣ…
1 min read
ಧಾರವಾಡ: ನಗರದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಡೆದಿರುವ ನಾಲ್ಕು ಅವಘಡಗಳಲ್ಲಿ ಮೂವರು ಸಾವನ್ನಪ್ಪಿ, ಹಲವರು ಗಾಯಗೊಂಡಿರುವ ಘಟನೆ ಸಂಭವಿಸಿದೆ.
ಧಾರವಾಡದ ಸಂಜೀವಿನಿ ಪಾರ್ಕ್ ಬಳಿಯಲ್ಲಿ ಬೈಕಿಗೆ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದು ಪರಾರಿಯಾಗಿದ್ದು, ಗಂಭೀರವಾಗಿ ಗಾಯಗೊಂಡಿದ್ದ ಮಹಾಂತೇಶ ಎಂಬ ಸವಾರ ಕಿಮ್ಸನಲ್ಲಿ ಚಿಕಿತ್ಸೆ ಫಲಿಸದೇ ಸಾವಿಗೀಡಾಗಿದ್ದಾನೆ.
ಅಮ್ಮಿನಬಾವಿ ಬಳಿ ನಿಂತಿದ್ದ ಟ್ರ್ಯಾಕ್ಟರ್‌ಗೆ ಬೈಕ್ ಡಿಕ್ಕಿ ಹೊಡೆದಿದ್ದು, ಸವಾರ ಸಿವಿಲ್ ಆಸ್ಪತ್ರೆಗೆ ತರುವ ಸಮಯದಲ್ಲಿ ಸಾವಿಗೀಡಾದ ಘಟನೆ ನಡೆದಿದೆ.
ಬೇಲೂರ ಬಳಿ ವಿದ್ಯುತ್ ತಗುಲಿ ವೀರಣ್ಣ ಎಂಬಾತ ಸಾವಿಗೀಡಾಗಿದ್ದಾನೆ. ಅಳ್ನಾವರದ ಸಮೀಪ ಅಪಘಾತ ನಡೆದಿದ್ದು ಮೂವರು ಗಾಯಗೊಂಡಿದ್ದಾರೆ.