ತಡಸಿನಕೊಪ್ಪ ಲಾರಿ ಸರಣಿ ಅಪಘಾತ- ನುಗ್ಗಿಕೇರಿ ಬಳಿ ನಡೆದದ್ದಾರೂ ಏನು..?
1 min read
ಧಾರವಾಡ: ಇಟ್ಟಂಗಿಗಳನ್ನ ಹೇರಿಕೊಂಡು ಹೋಗುತ್ತಿದ್ದ ಲಾರಿಯೊಂದು ಸರಣಿ ಅಪಘಾತ ಮಾಡಿದ್ದು, ವಾಹನದ ಬಳಿ ನಿಂತವರೆಲ್ಲರೂ ಚೆಲ್ಲಾಪಿಲ್ಲಿಯಾಗಿ ಓಡಿ ಹೋದ ಘಟನೆ ನುಗ್ಗಿಕೇರಿ ರಸ್ತೆಯ ಹೊಟೇಲೊಂದರ ಬಳಿ ಸಂಭವಿಸಿದೆ.
ಸಾವಿರಾರೂ ಇಟ್ಟಂಗಿಗಳನ್ನ ಹೊತ್ತುಕೊಂಡು ಹೋಗುತ್ತಿದ್ದ ಪೈಲ್ವಾನ್ ಹೆಸರಿನ ಲಾರಿಯು ಮೊದಲು ಬಳ್ಳಾರಿ ಮೂಲದ ಪ್ರಭುಲಿಂಗಸ್ವಾಮಿ ಅವರಿಗೆ ಸೇರಿದ ಕಾರಿಗೆ ಡಿಕ್ಕಿ ಹೊಡೆದು, ನಂತರ ಮಾರುತಿ ಗೇವಡೆ ಅವರಿಗೆ ಸೇರಿದ ಸ್ಕೂಟರ್ ಸೇರಿದಂತೆ ಒಟ್ಟು ಐದು ಬೈಕುಗಳಿಗೆ ಗುದ್ದಿದೆ.
ಲಾರಿ ವೇಗವಾಗಿ ಬಂದು ವಾಹನಗಳಿಗೆ ಡಿಕ್ಕಿ ಹೊಡೆಯುತ್ತ ಮರಕ್ಕೆ ಬಂದು ಡಿಕ್ಕಿ ಹೊಡೆದು ಅಲ್ಲಿಯೇ ನಿಂತಿದೆ. ತಮ್ಮ ವಾಹನದ ಬಳಿ ನಿಂತಿದ್ದ ಕೆಲವರು ಲಾರಿ ಬರುತ್ತಿರುವುದನ್ನ ನೋಡಿ ಹೋಗಿ ಪ್ರಾಣವನ್ನ ಉಳಿಸಿಕೊಂಡಿದ್ದಾರೆ.
ಪ್ರಕರಣದ ಕುರಿತು ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಜಖಂಗೊಂಡ ಬೈಕ ಹಾಗೂ ಕಾರಿನವರಿಂದ ಮಾಹಿತಿ ಪಡೆಯುತ್ತಿದ್ದಾರೆ.