Posts Slider

‘ಟೂರ್ ಮಾಡಲು’ ಬುಲೆಟ್ ಕದಿಯುತ್ತಿದ್ದವರ ಬಂಧಿಸಿದ ಹುಬ್ಬಳ್ಳಿ ಬೆಂಡಿಗೇರಿ ಠಾಣೆ ಪೊಲೀಸರು…!

1 min read
Spread the love

ಬುಲೆಟ್ ಬೈಕ್ ಗಳನ್ನೇ ಟಾರ್ಗೆಟ್ ಮಾಡಿ ಕಳ್ಳತನ ಮಾಡುತ್ತಿದ್ದ ಇಬ್ಬರ ಬಂಧನ.

ಹುಬ್ಬಳ್ಳಿ: ನಗರದಲ್ಲಿ ಬುಲೆಟ್ ಬೈಕ್ ಗಳನ್ನೇ ಟಾರ್ಗೆಟ್ ಮಾಡಿ ಕಳ್ಳತನ ಮಾಡುತ್ತಿದ್ದ ಇಬ್ಬರು ಖತರ್ನಾಕ್ ಕಳ್ಳರನ್ನು ಬೆಂಡಿಗೇರಿ ಠಾಣೆಯ ಪೊಲೀಸರು ಬಂಧನ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ವೀರಾಪುರ ಓಣಿಯ ಶಶಿಧರ ಹಾಗೂ ಗಿರೀಶ ಎಂಬಾತರೇ ಬೈಕ್ ಕಳ್ಳರಾಗಿದ್ದು, ಕೆಲವು ದಿನಗಳ ಹಿಂದೆ ಪಗಡಿ ಗಲ್ಲಿಯಲ್ಲಿ ಮುಸ್ತಾಫ್ ಮುಲ್ಲಾ ಎಂಬುವರಿಗೆ ಸೇರಿದ ಬುಲೆಟ್ ಬೈಕ್ ಕಳ್ಳತನ ಮಾಡಿ ಅದೇ ಬೈಕಿನಲ್ಲಿ ಶಿರಸಿ, ಮುಂಡಗೋಡ ಸೇರಿದಂತೆ ಇನ್ನುಳಿದ ಪ್ರವಾಸಿ ಸ್ಥಳಗಳಿಗೆ ತೆರಳಿ ಮೋಜು ಮಸ್ತಿ ಮಾಡ್ತಿದ್ದರು.

ಆರೋಪಿಗಳ ಬಗ್ಗೆ ಖಚಿತ ಮಾಹಿತಿ ಸಿಗುತ್ತಿದ್ದ ಹಾಗೆ ಬೆಂಡಿಗೇರಿ ಠಾಣೆಯ ಕ್ರೈಂ ಸಿಬ್ಬಂದಿಗಳಾದ ವೆಂಕಟೇಶ, ರಾಮಣ್ಣ, ಹನುಮಂತ ಹಾಗೂ ಬಸು ಸೇರಿಕೊಂಡು ಆರೋಪಿಗಳನ್ನು ಬುಲೆಟ್ ಸಮೇತ ಬಂಧನ ಮಾಡಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.


Spread the love

Leave a Reply

Your email address will not be published.