ಚೇತನ ಹಿರೇಕೆರೂರು ವಿರುದ್ಧ ‘FIR’- ಖಡಕ್ ವಾರ್ನಿಂಗ್ ನೀಡಿದ ಪೊಲೀಸ್ ಕಮೀಷನರ್

1 min read
Spread the love

ಹುಬ್ಬಳ್ಳಿ: ಮಹಾನಗರ ಪಾಲಿಕೆ ಸದಸ್ಯ ಚೇತನ ಹಿರೇಕೆರೂರ ಸೇರಿದಂತೆ ಐವರ ಮೇಲೆ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ವಿದ್ಯಾನಗರದಲ್ಲಿ ಪ್ರಕರಣ ದಾಖಲಿಸಿದವರ ಪೈಕಿ ಇಬ್ಬರ ಮೇಲೆ ಗೋಕುಲ ರಸ್ತೆ ಪೊಲೀಸ್ ಠಾಣೆಯಲ್ಲಿ ಬೇರೊಂದು ಪ್ರಕರಣ ದಾಖಲಾಗಿದೆ.

ಮಹಾನಗರ ಪಾಲಿಕೆ ಸದಸ್ಯನಾದ ನಂತರ ಮೊದಲ ಪ್ರಕರಣ ಚೇತನ ಹಿರೇಕೆರೂರ ವಿರುದ್ಧ ದಾಖಲಾಗಿದ್ದು, ದೂರು ದಾಖಲಾದ ಐವರಿಗೂ ಠಾಣೆ ವ್ಯಾಪ್ತಿಯಲ್ಲಿಯೇ ಬೇಲ್ ನೀಡಲಾಗಿದೆ.

ಈ ಬಗ್ಗೆ ಸ್ವತಃ ಪೊಲೀಸ್ ಕಮೀಷನರ್ ವಿದ್ಯಾನಗರ ಠಾಣೆಗೆ ಆಗಮಿಸಿ, ನಡುರಸ್ತೆಯಲ್ಲಿಯೇ ಬಡಿದಾಡಿಕೊಂಡಿದ್ದರ ಬಗ್ಗೆ ತರಾಟೆಗೆ ತೆಗೆದುಕೊಂಡರು. ಇದೇ ಥರನಾಗಿ ನಡೆದುಕೊಂಡರೇ ಗಡಿಪಾರಿನಂತಹ ಕ್ರಮವನ್ನ ಜರುಗಿಸಲಾಗುವುದೆಂದು ಖಡಕ್ ಸಂದೇಶವನ್ನ ರವಾನೆ ಮಾಡಿದರು.

ಚೇತನ ಹಿರೇಕೆರೂರ ವಿರುದ್ಧ ಪ್ರಕರಣ ದಾಖಲು ಮಾಡಿದ್ದವರ ಪೈಕಿ, ಹಿರೇಕೆರೂರು ಕುಟುಂಬದವರು ನೀಡಿದ ದೂರಿನ ಮೇರೆಗೆ ನಿಖಿಲ್ ದಾಂಡೇಲಿ ಸೇರಿದಂತೆ ಇಬ್ಬರ ಮೇಲೆ ಪ್ರಕರಣ ದಾಖಲಾಗಿದೆ.


Spread the love

Leave a Reply

Your email address will not be published.