Posts Slider

ಚಿತ್ರನಟ ‘ಪ್ರೇಮ’ ಹುಬ್ಬಳ್ಳಿಯಲ್ಲಿ- ಎಂಇಎಸ್ ಬಗ್ಗೆ ಹೇಳಿದ್ದೇನು ಗೊತ್ತಾ…!?

1 min read
Spread the love

ಹುಬ್ಬಳ್ಳಿ: ಯಾವುದೇ ಸಂಘಟನೆಗಳು ಇರುವುದು ಸಾರ್ವಜನಿಕರ ನಮ್ಮೆದಿಯನ್ನ ಕಾಪಾಡುವುದಕ್ಕೆ. ಅದನ್ನ ಮೀರಿದರೇ ಬ್ಯಾನ್ ಮಾಡುವ ಸ್ಥಿತಿ ಬಂದೇ ಬರತ್ತೆ. ಅದನ್ನ ಮಾಡಲು ಎಂಇಎಸ್ ಮುಂದಾಗಬಾರದೆಂದು ಚಿತ್ರನಟ ಪ್ರೇಮ ಹೇಳಿದರು.

ಹುಬ್ಬಳ್ಳಿಯ ಶ್ರೀ ಸಿದ್ಧಾರೂಢ ಮಠಕ್ಕೆ ಭೇಟಿ ನೀಡಿದ ನಂತರ ಮಾತನಾಡಿದ ಪ್ರೇಮ್,  ಎಂಇಎಸ್ ಪುಂಡಾಟಿಕೆ ಹೀಗೆ ಮುಂದುವರೆದರೆ ರಾಜ್ಯದಲ್ಲಿ ಎಂಇಎಸ್ ಸಂಘಟನೆ ಬ್ಯಾನ್ ಆಗಬೇಕು. ಪುಂಡಾಟಿಕೆಯಿಂದ ದೇಶದಲ್ಲಿ ಎಂಇಎಸ್ ಗೆ ಒಳ್ಳೆಯ ಹೆಸರು ಬರಲ್ಲ ಎಂದರು.

ರಾಜ್ಯದಲ್ಲಿ ಕನ್ನಡಿಗರು ಹಾಗೂ ಮರಾಠಿಗರು ಭಾಂದವ್ಯದಿಂದ ಇದ್ದಾರೆ. ಆ ಭಾಂದವ್ಯವನ್ನ ಹಾಳು ಮಾಡುವಂತಹ ಕೆಲಸಕ್ಕೆ ಎಂಇಎಸ್ ಕೈ ಹಾಕಬಾರದು. ಯಾವುದೇ ಸಂಘಟನೆಗಳಿರಲಿ ಶಾಂತಿ ಕಾಪಾಡಬೇಕು. ರಾಜ್ಯದಲ್ಲಿ ಮರಾಠಿ ಚಿತ್ರಗಳಿಗೂ ಹಾಗೂ ಹಿಂದಿ ಚಿತ್ರಗಳಿಗೂ ಅವಕಾಶ ನೀಡಲಾಗಿದೆ. ಎಂಇಎಸ್ ನವರು ಸಾರ್ವಜನಿಕ ಆಸ್ತಿಪಾಸ್ತಿ ಹಾಳು ಮಾಡುವದರಿಂದ ಏನನ್ನೂ ಸಾಧಿಸಲಾಗುವುದಿಲ್ಲ ಎಂದು ಹೇಳಿದರು.

ಎಂಇಎಸ್ ಬ್ಯಾನ್ ವಿಚಾರದಲ್ಲಿ ಸರ್ಕಾರದ ನಿಲುವು ಏನಿದೆಯೋ ಗೊತ್ತಿಲ್ಲ. ಆದ್ರೆ, ಕನ್ನಡಿಗರ ಮೇಲಿನ ದಬ್ಬಾಳಿಕೆ ಸಹಿಸಲ್ಲ. ಕನ್ನಡ ಚಿತ್ರರಂಗ ಹೋರಾಟಕ್ಕಿಳಿದರೆ ನಮ್ಮವರಿಗೆ ತೊಂದರೆಯಾಗಲಿದೆ ಅನ್ನೋ ಹಿನ್ನೆಲೆ ಶಾಂತರೀತಿಯಾಗಿದ್ದಾರೆ ಎಂದರು.


Spread the love

Leave a Reply

Your email address will not be published. Required fields are marked *