Posts Slider

ಕಲಘಟಗಿಯ “ಸಂತೋಷಾಮೃತ”ದಲ್ಲಿ ಸಲೀಂ ಅಹ್ಮದ ಪರ ‘ಲಾಡ’ ಪ್ರಚಾರ…!

1 min read
Spread the love

ಕಲಘಟಗಿ: ಸ್ಥಳೀಯ ಸಂಸ್ಥೆಗಳ ವಿಧಾನಪರಿಷತ್ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಸಲೀಂ ಅಹ್ಮದರ ಪರವಾಗಿ ಸೋಮವಾರ ಕಲಘಟಗಿಯಲ್ಲಿ ಮಾಜಿ ಸಚಿವ ಸಂತೋಷ ಲಾಡ ಪ್ರಚಾರ ನಡೆಸಲಿದ್ದಾರೆ.

ಇದೇ ಕಾರಣಕ್ಕಾಗಿ ತಮ್ಮ ಅಮೃತ ನಿವಾಸದಲ್ಲಿ ಕ್ಷೇತ್ರದ ಚುನಾಯಿತ ಸದಸ್ಯರನ್ನ ಕರೆಸಲು ಸನ್ನದ್ಧರಾಗಿದ್ದು, ಸಲೀಂ ಅಹ್ಮದರ ಪರವಾಗಿ ಚಕ್ರವ್ಯೂಹ ರಚನೆ ಮಾಡಲಿದ್ದಾರೆ.

ಮಾಜಿ ಸಚಿವ ಸಂತೋಷ ಲಾಡ, ಸಲೀಂ ಅಹ್ಮದ ಅವರ ಗೆಲುವಿನಲ್ಲಿ ಪ್ರಮುಖ ಪಾತ್ರವನ್ನ ವಹಿಸಲಿದ್ದು, ಓರ್ವ ರಾಜ್ಯ ನಾಯಕನಿಗಿರಬೇಕಾದ ಅರ್ಹತೆಯನ್ನ ಹೊಂದಿದ್ದಾರೆ. ಹೀಗಾಗಿಯೇ, ಸಂತೋಷ ಲಾಡರ ನಿವಾಸದಲ್ಲಿಯೇ ಕಾರ್ಯಕ್ರಮ ಆಯೋಜನೆಗೊಂಡಿದೆ.

ಮಾಜಿ ಸಚಿವ ಸಂತೋಷ ಲಾಡರ ಪರವಾಗಿ ಪ್ರಮುಖರು ಮಾಡಿಕೊಂಡ  ಮನವಿ ಇಲ್ಲಿದೆ..

ಮಾನ್ಯರೇ..

ನಾಳೆ ದಿನಾಂಕ 29-11-2021 ರಂದು ಸಾಯಂಕಾಲ 4 ಘಂಟೆಗೆ ಮಾಡಕಿಹೊನ್ನಳ್ಳಿಯ ಅಮೃತ್ ನಿವಾಸದಲ್ಲಿ 2021ರ ವಿಧಾನ ಪರಿಷತ್ ಚುನಾವಣೆಯ ಪ್ರಚಾರಸಭೆಯನ್ನು ಹಮ್ಮಿಕೊಳ್ಳಲಾಗಿದೆ.

ಈ ಒಂದು ಸಭೆಗೆ ಗೌರವಾನ್ವಿತ ಕೆಪಿಸಿಸಿ ಕಾರರ್ಯಾಧ್ಯಕ್ಷರು, ಹಾಗೂ  ವಿಧಾನ ಪರಿಷತ್ ಚುನಾವಣೆಯ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ಸನ್ಮಾನ್ಯ ಶ್ರೀ ಸಲೀಮ್ ಅಹಮದ್ ಅವರು ಮತ್ತು ಮಾಜಿ ಸಚಿವರು, ಕಲಘಟಗಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರಾದ ಗೌರವಾನ್ವಿತ ಶ್ರೀ ಸಂತೋಷ ಎಸ್ ಲಾಡ್ ಅವರು ಮತ್ತು  ಹುಬ್ಬಳ್ಳಿ ಧಾರವಾಡ, ಗದಗ, ಹಾವೇರಿ ಜಿಲ್ಲೆಯ ಕಾಂಗ್ರೆಸ್ ಪಕ್ಷದ ಹಿರಿಯ ಧುರೀಣರು,ಕಾರ್ಯಕರ್ತರು ಬಾಗವಹಿಸುವವರು.

ಆದ ಕಾರಣ ಕಲಘಟಗಿ ವಿಧಾನಸಭಾ ಕ್ಷೇತ್ರದ ಎಲ್ಲ ಗ್ರಾಮ ಪಂಚಾಯತಿಯ ಗೌರವಾನ್ವಿತ ಅಧ್ಯಕ್ಷರು/ಉಪಾಧ್ಯಕ್ಷರು ಮತ್ತು ಸರ್ವ ಸದಸ್ಯರು, ತಾಲೂಕು ಪಂಚಾಯತ್ ಹಾಗೂ ಜಿಲ್ಲಾ ಪಂಚಾಯತಿಯ ಗೌರವಾನ್ವಿತ ಮಾಜಿ ಅಧ್ಯಕ್ಷರು ಹಾಗೂ ಸರ್ವ ಸಮಿತಿಯ ಸದಸ್ಯರು ಮತ್ತು ಪಟ್ಟಣ ಪಂಚಾಯತಿಯ ಗೌರವಾನ್ವಿತ ಅಧ್ಯಕ್ಷರು ಮತ್ತು ಸದಸ್ಯರು ಈ ಒಂದು ಕಾರ್ಯಕ್ರಮಕ್ಕೆ ಆಗಮಿಸಬೇಕೆಂದು ತಮ್ಮಲ್ಲಿ ಗೌರವಪೂರಕವಾಗಿ ಕೇಳಿಕೊಳ್ಳುತ್ತೇವೆ.

ಆದ ಕಾರಣ ಕಲಘಟಗಿ ವಿಧಾನಸಭಾ ಕ್ಷೇತ್ರದ ಎಲ್ಲ ಕಾಂಗ್ರೆಸ್ ಪಕ್ಷದ ಮುಖಂಡರು, ಮುಂಚೂಣಿ ಘಟಕದ ಅಧ್ಯಕ್ಷರು/ ಪದಾಧಿಕಾರಿಗಳು ಮತ್ತು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಈ ಒಂದು ಕಾರ್ಯಕ್ರಮಕ್ಕೆ ಆಗಮಿಸಿ ಯಶಸ್ವಿಗೊಳಿಸಬೇಕೆಂದು ಕೇಳಿಕೊಳ್ಳುತ್ತೇವೆ.


Spread the love

Leave a Reply

Your email address will not be published. Required fields are marked *