Posts Slider

“ಕರಿ ಎತ್ತು ಕಾಳಿಂಗ.. ಬಿಳಿ ಎತ್ತು ಮಾಲಿಂಗಾ”- ಹೊರಟು ಬಂದರು ಜಿಲ್ಲಾಧಿಕಾರಿ ನಿತೇಶ ಪಾಟೀಲ…

1 min read
Spread the love

ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ

ಪೂರ್ಣಕುಂಭದೊಂದಿಗೆ ಚಕ್ಕಡಿಯಲ್ಲಿ ಮೆರವಣಿಗೆ ಮೂಲಕ ಜಿಲ್ಲಾಧಿಕಾರಿ ನಿತೇಶ ಪಾಟೀಲ ಅವರನ್ನು ಸ್ವಾಗತಿಸಿದ ವನಹಳ್ಳಿ ಗ್ರಾಮಸ್ಥರು.

ಧಾರವಾಡ: ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮದ ಅಂಗವಾಗಿ ಧಾರವಾಡ ಜಿಲ್ಲಾಧಿಕಾರಿ ನಿತೇಶ ಪಾಟೀಲ ಅವರು ಇಂದು ಬೆಳಿಗ್ಗೆ  ಧಾರವಾಡ ತಾಲೂಕಿನ ಕಡೆಯ ಗ್ರಾಮ ವನಹಳ್ಳಿಯಲ್ಲಿ ಗ್ರಾಮ ವಾಸ್ತವ್ಯದ ಅಂಗವಾಗಿ ಆಗಮಿಸಿದಾಗ ಗ್ರಾಮಸ್ಥರು ಪೂರ್ಣಕುಂಭದ ಸ್ವಾಗತ ನೀಡಿದರು.

ಎತ್ತಿನ ಚಕ್ಕಡಿ ಮೂಲಕ ಊರಿನ ಪ್ರಮುಖ ಬೀದಿಗಳಲ್ಲಿ ಮೆರವಣೆಗೆ ಮೂಲಕ ಸಂಚರಿಸಿದರು. ಡೊಳ್ಳು ಕುಣಿತ, ಶಾಲಾ ಮಕ್ಕಳ ಪ್ರಭಾತಪೇರಿಯೊಂದಿಗೆ ಪುಷ್ಪಾರ್ಣೆ ಮಾಡಿ ಅತ್ಯಂತ ವಿಜೃಂಭಣೆಯಿಂದ ಪ್ರೀತಿ, ಅಭಿಮಾನದಿಂದ ಸ್ವಾಗತಿಸಿದರು.

ಮೆರವಣಿಗೆಯಲ್ಲಿ ಗ್ರಾಮಸ್ಥರು, ಮಕ್ಜಳು, ಮಹಿಳೆಯರು, ಸಂಘ, ಸಂಸ್ಥೆಗಳ ಪ್ರತಿನಿಧಿಗಳು, ಗ್ರಾಮ ಪಂಚಾಯತ ಅಧ್ಯಕ್ಷ, ಸದಸ್ಯರು ಭಾಗವಹಿಸಿದ್ದರು.

ಮೆರವಣಿಗೆ ನಂತರ ವನಹಳ್ಳಿ ಸರಕಾರಿ ಶಾಲಾ  ಆವರಣದಲ್ಲಿ  ಗ್ರಾಮ ವಾಸ್ತವ್ಯ ಸವಿನೆನಪಿಗಾಗಿ ಜಿಲ್ಲಾಧಿಕಾರಿಗಳು ಹಾಗೂ ಅತಿಥಿಗಳು ಸಸಿ ನೆಟ್ಟರು.


Spread the love

Leave a Reply

Your email address will not be published. Required fields are marked *