Posts Slider

ಹುಬ್ಬಳ್ಳಿಯಲ್ಲಿ “ಬಯೋ ಡಿಸೇಲ್” ಮಾಫಿಯಾ: ಸಿಸಿಬಿ ಪೊಲೀಸರ ಬೃಹತ್ ರೇಡ್….!

1 min read
Spread the love

ಹುಬ್ಬಳ್ಳಿ: ಪೂನಾ ಬೆಂಗಳೂರು ರಸ್ತೆಯಲ್ಲಿನ ಭಾರತ ಸರ್ವೀಸ್ ಸೆಂಟರ್ ನಲ್ಲಿ ನಡೆಯುತ್ತಿದ್ದ ಬಯೋ ಡಿಸೇಲ್ ಮಾಫಿಯಾದ ಮೇಲೆ ಹುಬ್ಬಳ್ಳಿ-ಧಾರವಾಡ ಸಿಸಿಬಿ ಪೊಲೀಸರು ದಾಳಿ ಮಾಡಿದ್ದು, ಸಾವಿರಾರೂ ಲೀಟರ್ ಬಯೋ ಡಿಸೇಲ್ ವಶಕ್ಕೆ ಪಡೆದಿದ್ದಾರೆ.

ಹನೀಫ ಅಹ್ಮದ ಹೊನ್ಯಾಳ ಮಾಲಿಕತ್ವದಲ್ಲಿ ನಡೆಯುತ್ತಿದ್ದ ದಂಧೆಯ ಖಚಿತ ಮಾಹಿತಿ ಆಧರಿಸಿ ಸಿಸಿಬಿ ಇನ್ಸಪೆಕ್ಟರ್ ಅಲ್ತಾಫ ಮುಲ್ಲಾ ನೇತೃತ್ವದ ತಂಡ ದಾಳಿ ಮಾಡಿದೆ.

ಎಕ್ಸಕ್ಲೂಸಿವ್ ವೀಡಿಯೋ ಇಲ್ಲಿದೆ ನೋಡಿ..

ದಾಳಿಯ ವೇಳೆಯಲ್ಲಿ ಸುಮಾರು 13000 ಲೀಟರ್ ಬಯೋ ಡಿಸೇಲ್ ದೊರಕಿದ್ದು, ಬ್ಯಾರೆಲಗಳಲ್ಲಿ ಅದನ್ನ ತುಂಬಿಟ್ಟು ಮಾರಾಟ ಮಾಡಲಾಗುತ್ತಿತ್ತು. ಅವಳಿನಗರದ ಇತಿಹಾಸದಲ್ಲಿ ಮೊದಲ ಬಾರಿಗೆ ಬಯೋ ಡಿಸೇಲ್ ದಂಧೆ ಪತ್ತೆಯಾಗಿದ್ದು, ಪೊಲೀಸರು ಮತ್ತಷ್ಟು ಆಳ ಅಗಲವನ್ನ ಪತ್ತೆ ಹಚ್ಚಲಿದ್ದಾರೆ.


Spread the love

Leave a Reply

Your email address will not be published. Required fields are marked *