Posts Slider

ಹುಬ್ಬಳ್ಳಿಯಲ್ಲಿ ಎರಡು ಮನೆಗೆ ಕನ್ನ-10ಲಕ್ಷಕ್ಕೂ ಹೆಚ್ಚು ಚಿನ್ನಾಭರಣ ಲೂಟಿ…

1 min read
Spread the love

ಹುಬ್ಬಳ್ಳಿ: ನಗರದ ಎರಡು ಪ್ರಕರಣಗಳಲ್ಲಿ ಮನೆಯ ಬಾಗಿಲು, ಬೀಗವನ್ನ ಒಡೆದು ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣವನ್ನ ದೋಚಿಕೊಂಡು ಹೋಗಿರುವ ಘಟನೆ ನಡೆದಿವೆ.

ಹುಬ್ಬಳ್ಳಿಯ ವಿದ್ಯಾನಗರದ ಪೊಲೀಸ್ ಠಾಣೆ ವ್ಯಾಪ್ತಿಯ ಕಾಳಿದಾಸನಗರದಲ್ಲಿನ ಮನೆಯನ್ನ ಕಳ್ಳತನ ಮಾಡಲಾಗಿದೆ. ಪರ್ವತಗೌಡ ಪಾಟೀಲ ಎಂಬುವವರ ಮನೆಗೆ ಕನ್ನ ಹಾಕಿರುವ ಚೋರರು, 6ಲಕ್ಷ 10 ಸಾವಿರ ರೂಪಾಯಿ ಮೌಲ್ಯದ 210 ಗ್ರಾಂ ಚಿನ್ನವನ್ನ ದೋಚಿದ್ದಾರೆ.

file photo

ಗೋಪನಕೊಪ್ಪದ ಮಹಾಲಕ್ಷ್ಮೀ ಬಡಾವಣೆಯಲ್ಲಿನ ಗಂಗವ್ವ ಬೀರಣ್ಣನವರ ಮನೆಯ ಬಾಗಿಲನ್ನ ಮುರಿದು ಕಳ್ಳತನ ಮಾಡಲಾಗಿದೆ.

ಮನೆಯಲ್ಲಿದ್ದ ಒಂದೂವರೆ ಲಕ್ಷ ಮೌಲ್ಯದ 75 ಗ್ರಾಂ ಚಿನ್ನ, 43 ಸಾವಿರ ರೂಪಾಯಿ ಮೌಲ್ಯದ ಬೆಳ್ಳಿ ಹಾಗೂ ಒಂದೂವರೆ ಲಕ್ಷ ರೂಪಾಯಿ ನಗದನ್ನ ದೋಚಿಕೊಂಡು ಪರಾರಿಯಾಗಿದ್ದಾರೆ.

ವಿದ್ಯಾನಗರ ಹಾಗೂ ಅಶೋಕನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಬಗ್ಗೆ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ.


Spread the love

Leave a Reply

Your email address will not be published. Required fields are marked *