Posts Slider

ದಶಕಗಳಲ್ಲೇ “ಹೈಪ್ರೊಫೈಲ್ ಮದುವೆ” ಹುಬ್ಬಳ್ಳಿಯಲ್ಲಿ… ರಾಷ್ಟ್ರೀಯ ಗಣ್ಯರ ದಂಡು ಆಗಮನ…!

1 min read
Spread the love

ಹುಬ್ಬಳ್ಳಿ: ಕೇಂದ್ರ ಸರ್ಕಾರದ ಸಂಸದೀಯ ವ್ಯವಹಾರಗಳು ಮತ್ತು ಗಣಿ ಹಾಗೂ ಕಲ್ಲಿದ್ದಲು ಸಚಿವ ಪ್ರಹ್ಲಾದ್ ಜೋಷಿಯವರ ಪುತ್ರಿಯ ಮದುವೆ ಸೆಪ್ಟೆಂಬರ್ 2ರಂದು ಹುಬ್ಬಳ್ಳಿಯಲ್ಲಿ ನಡೆಯಲಿದೆ.

ಇತ್ತೀಚಿನ ದಶಕಗಳಲ್ಲಿ  ಹುಬ್ಬಳ್ಳಿಯಲ್ಲಿ ನಡೆಯುತ್ತಿರುವ ಹೈಪ್ರೊಫೈಲ್ ಮದುವೆ ಇದಾಗಿದ್ದು ಈಗಾಗಲೇ ಭಾರಿ ಸಿದ್ಧತೆಗಳು ನಡೆದಿವೆ. ಇದಕ್ಕಿಂತ ಮುಖ್ಯವಾಗಿ ಮದುವೆಯಲ್ಲಿ ಭಾಗವಹಿಸುತ್ತಿರುವ ಅತಿಗಣ್ಯರು ಯಾರೆಂಬುದು ಜನಸಾಮಾನ್ಯರಲ್ಲಿ ಭಾರಿ ಕುತೂಹಲ ಕೆರಳಿಸಿದೆ.

file photo

ಬಿಜೆಪಿ ಉನ್ನತ ಮೂಲಗಳ ಪ್ರಕಾರ ಕೇಂದ್ರದ ಗೃಹ ಸಚಿವ ಅಮಿತ್ ಶಾ ಹಾಗೂ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸೇರಿದಂತೆ ದೇಶದ ಅತ್ಯುನ್ನತ ಗಣ್ಯರು ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ.

ಇನ್ನು ರಾಜ್ಯದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ, ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಸೇರಿದಂತೆ ಇನ್ನೂ ಅನೇಕರು ರಾಜ್ಯ ಮತ್ತು ಹೊರ ರಾಜ್ಯದ ಗಣ್ಯರು ಭಾಗವಹಿಸಲಿದ್ದಾರೆ.

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಚುನಾವಣೆಯ ಮುನ್ನಾದಿನ ನಡೆಯುವ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಪುತ್ರಿಯ ಮದುವೆ ಬಿಜೆಪಿಯಲ್ಲಿ ಡಬಲ್ ಸಂಭ್ರಮಕ್ಕೆ ಕಾರಣವಾಗಿದೆ.


Spread the love

Leave a Reply

Your email address will not be published. Required fields are marked *