Posts Slider

“ವಿಜಯಾನಂದ” ಹೆಸರಿನಲ್ಲಿ ಸಿದ್ಧವಾಗಲಿದೆ ವಿಜಯ ಸಂಕೇಶ್ವರರ ಸಿನೇಮಾ…!

1 min read
Spread the love

ಹುಬ್ಬಳ್ಳಿ: ವಿಆರ್ ಎಲ್ ಸಮೂಹ ಸಂಸ್ಥೆಯು ಚಿತ್ರ ನಿರ್ಮಾಣಕ್ಕೆ ಮುಂದಾಗಿದ್ದು, ತಮ್ಮ ಚೊಚ್ಚಲ ಚಿತ್ರವನ್ನ ‘ವಿಜಯಾನಂದ’ ಸಿನೇಮಾದ ಮೂಲಕ ಆರಂಭಿಸಲು ಸಿದ್ಧವಾಗಿದ್ದು, ಈ ಚಿತ್ರವು ವಿಜಯ ಸಂಕೇಶ್ವರ ಅವರ ಜೀವನಾಧರಿತವಾಗಿದೆ.

ಉದ್ಯಮಿ ವಿಜಯ ಸಂಕೇಶ್ವರ ಅವರು ಒಂದು ಲಾರಿಯಿಂದ ಇಷ್ಟೊಂದು ಲಾರಿಗಳನ್ನ ಮಾಡಿದ್ದಲ್ಲದೇ, ದೇಶದಲ್ಲಿ ಹೆಸರುವಾಸಿಯಾಗಿದ್ದು ಹೇಗೆ ಎಂಬುದನ್ನ ಕಮರ್ಷಿಯಲ್ ರೂಪದಲ್ಲಿ ತೋರಿಸಲು ಮುಂದಾಗಿದ್ದಾರೆ.

ವಿಜಯ ಸಂಕೇಶ್ವರ ಅವರ ಪಾತ್ರವನ್ನ ಉತ್ತರ ಕರ್ನಾಟಕದ ಪ್ರತಿಭೆ ನಿಹಾಲ್ ರಜಪೂತ ನಿಭಾಯಿಸಲಿದ್ದಾರೆ. ಚಿತ್ರದ ನಿರ್ದೇಶವನ್ನ ರಿಶಿಕಾ ಶರ್ಮಾ ಮಾಡಲಿದ್ದು, ಮುಂದಿನ ತಿಂಗಳಿಂದ ಚಿತ್ರೀಕರಣ ಆರಂಭವಾಗಲಿದೆ.

ಉತ್ತರಕರ್ನಾಟಕದ ಹೆಮ್ಮೆಯ ವಿಜಯ ಸಂಕೇಶ್ವರ ಅವರ ಜೀವನಗಾಥೆ ಸಿನೇಮಾ ಆಗುತ್ತಿರುವುದು, ಸಿನಿಪ್ರಿಯರಲ್ಲಿ ಮತ್ತಷ್ಟು ಕೌತುಕ ಮೂಡಿಸಿದೆ.


Spread the love

Leave a Reply

Your email address will not be published. Required fields are marked *