Posts Slider

ಕೇಂದ್ರದ ಮಂತ್ರಿಯಾಗಿದ್ದ “ತಾವರಚೆಂದ ಗೆಹ್ಲೋಟ್” ಕರ್ನಾಟಕದ 19ನೇ ರಾಜ್ಯಪಾಲರಾಗಿ ನೇಮಕ…!

1 min read
Spread the love

ನವದೆಹಲಿ: ಕೇಂದ್ರದ ಸಚಿವ ಸಂಪುಟದಲ್ಲಿ ಮೇಜರ್ ಸರ್ಜರಿ ನಡೆಯುತ್ತಿರುವ ಸಮಯದಲ್ಲಿಯೇ ಕೇಂದ್ರ ಸಚಿವ ತಾವರಚಂದ ಗೆಹ್ಲೋಟ್ ಅವರನ್ನ ಕರ್ನಾಟಕದ ರಾಜ್ಯಪಾಲರನ್ನಾಗಿ ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ.

The Union Minister for Social Justice and Empowerment, Shri Thaawar Chand Gehlot addressing a press conference on the achievements of the Ministry of Social Justice and Empowerment, during the last four years, in New Delhi on June 26, 2018.

73 ವಯಸ್ಸಿನ ತಾವರಚೆಂದ ಗೆಹ್ಲೋಟ್ ಅವರು ಮೇಲ್ಮನೆಯ ನಾಯಕರಾಗಿಯೂ ಕಾರ್ಯನಿರ್ವಹಿಸಿದ್ದರು. ದಲಿತ ಸಮುದಾಯದ ಇವರನ್ನ ಕರ್ನಾಟಕದ 19ನೇ ರಾಜ್ಯಪಾಲರನ್ನಾಗಿ ನೇಮಕ ಮಾಡಿ ಕೇಂದ್ರ ಸರಕಾರ ಆದೇಶ ಹೊರಡಿಸಿದೆ.

ಮದ್ಯಪ್ರದೇಶದ ರಾಜ್ಯ ಸಭೆ ಸದಸ್ಯರಾಗಿದ್ದ ಇವರು 2014ರಿಂದ ಕೇಂದ್ರದಲ್ಲಿ ಸಚಿವರಾಗಿದ್ದರು. 1948ರ ಮೇ 18ರಂದು ಜನಿಸಿರುವ ಗೆಹ್ಲೋಟ್ ಅವರು, ವಜುಬಾಯಿ ವಾಲಾ ಅವರ ಜಾಗಕ್ಕೆ ಬರುತ್ತಿದ್ದಾರೆ.


Spread the love

Leave a Reply

Your email address will not be published. Required fields are marked *