Posts Slider

Spread the love

ಬೆಂಗಳೂರು: ರಾಜ್ಯದ ಪ್ರತಿ ಜಿಲ್ಲಾ ಕೇಂದ್ರವೂ ಸೇರಿದಂತೆ ಎಲ್ಲ ತಾಲೂಕು ಕೇಂದ್ರಗಳಲ್ಲೂ ಮತ್ಸ್ಯದರ್ಶಿನಿ ಹೊಟೇಲ್ ಆರಂಭಿಸಿಲು ರಾಜ್ಯ ಸರಕಾರ ಚಿಂತನೆ ನಡೆಸಿದೆ ಎಂದು ಮೀನುಗಾರಿಕೆ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

ರಾಜ್ಯದಲ್ಲಿ ಮೀನಿನ ಊಟವನ್ನ ಕಡಿಮೆ ದರದಲ್ಲಿ ನೀಡುವ ಉದ್ದೇಶದಲ್ಲಿ ಈ ದರ್ಶಿನಿಯನ್ನ ತೆಗೆಯುವ ಯೋಚನೆಯಿದೆ. ಈ ಹೊಟೇಲ್ ಗಳಲ್ಲಿ ಕನಿಷ್ಟ 100ರೂಪಾಯಿಗೆ ಎಲ್ಲ ಬಗೆಯ ಮೀನಿನೂಟ ಸಿಗುವಂತಹ ಯೋಜನೆಯಿದಾಗಿದೆ. ಆರ್ಥಿಕ ಇಲಾಖೆಗೆ ಕಳಿಸಿರುವ ಪ್ರಸ್ತಾವನೆಯಲ್ಲಿ 100 ಕೋಟಿ ರೂಪಾಯಿ ಅಂದಾಜು ವೆಚ್ಚವೆಂದು ವಿವರಿಸಲಾಗಿದೆ. ಈ ಎಲ್ಲ ಹೊಟೇಲ್ ಗಳನ್ನು KFDC ಮಳಿಗೆಗಳ ಮೂಲಕವೇ ಆರಂಭಿಸಲಾಗುತ್ತದೆ ಎಂಬ ಮಾಹಿತಿಯನ್ನ ಸಚಿವರು ನೀಡಿದ್ದಾರೆ.


Spread the love

Leave a Reply

Your email address will not be published. Required fields are marked *